ಗಂಗಾವತಿ ಗ್ರಾಮ ದೇವತೆ ಜಾತ್ರೆ.. 208 ಕ್ಕೂ ಹೆಚ್ಚು ಮಹಿಳೆಯರಿಂದ ಕುಂಭ ಮೆರವಣಿಗೆ
ಗಂಗಾವತಿ(ಕೊಪ್ಪಳ): ಐದು ವರ್ಷಕ್ಕೊಮ್ಮೆ ನಡೆಯುವ ಗ್ರಾಮ ದೇವತೆ ದುರ್ಗಾದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ 208ಕ್ಕೂ ಹೆಚ್ಚು ಮಹಿಳೆಯರಿಂದ ಕುಂಭ ಮೆರವಣಿಗೆ ನಡೆಯಿತು. ಕಲ್ಮಠದ ಸಮೀಪ ಇರುವ ಸುಂಕಲಮ್ಮ ಕಟ್ಟೆಯಿಂದ ಆರಂಭವಾದ ಕುಂಭ ಮೆರವಣಿಗೆಗೆ ಮಾಜಿ ಸಂಸದ ಎಚ್ ಜಿ ರಾಮುಲು ಚಾಲನೆ ನೀಡಿದರು. ಬಳಿಕ ಮೆರವಣಿಗೆ ವಾಸವಿ, ಬಸವಣ್ಣ, ಮಹಾತ್ಮಗಾಂಧಿ, ಗಣೇಶ ವೃತ್ತದ ಮೂಲಕ ಸಾಗಿ ದುರ್ಗಾದೇವಿ ದೇವಸ್ಥಾನವನ್ನು ತಲುಪಿತು. ದೇಗುಲದಲ್ಲಿ ಕುಂಭದ ಜಲದಿಂದ ವಿಶೇಷ ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ನಾನಾ ಸಮಾಜಗಳ ಮುಖಂಡರು, ಉದ್ಯಮಿಗಳು, ಹಾಲಿ-ಮಾಜಿ ಚುನಾಯಿತ ಪ್ರತಿನಿಧಿಗಳು ಹಾಜರಿದ್ದರು.
Last Updated : Feb 3, 2023, 8:36 PM IST