ಹಾವೇರಿಯಲ್ಲಿ ನೋಟುಗಳಿಂದ ಅಲಂಕಾರಗೊಂಡ ಆಕರ್ಷಕ ಗಣೇಶ: ವಿಡಿಯೋ ನೋಡಿ - ಗಣೇಶ ಚತುರ್ಥಿ
Published : Sep 27, 2023, 12:28 PM IST
ಹಾವೇರಿ : ಇಲ್ಲಿನ ದಾನೇಶ್ವರಿ ನಗರದ ವಿನಾಯಕ ದೇವಸ್ಥಾನದಲ್ಲಿ ಈ ಬಾರಿ ಗಣೇಶನಿಗೆ ವಿಶಿಷ್ಟ ಅಲಂಕಾರ ಮಾಡಲಾಗಿದೆ. ಗಣೇಶ ಚತುರ್ಥಿ ದಿನದಂದು ಮಣ್ಣಿನ ಗಣೇಶನ ವಿಗ್ರಹ ತಂದು ಸಮಿತಿಯವರು ಸ್ಥಾಪನೆ ಮಾಡಿದ್ದರು. ದೇವಸ್ಥಾನದ ಅರ್ಚಕ ಚೆನ್ನಬಸಯ್ಯನವರಿಗೆ ಬೆಂಗಳೂರಿನಲ್ಲಿ ಕರೆನ್ಸಿ ನೋಟುಗಳಿಂದ ಗಣಪತಿ ಅಲಂಕಾರ ಮಾಡಿರುವ ವಿಚಾರ ತಿಳಿದು, ತಾವೂ ಸಹ ಗಣೇಶನ ವಿಗ್ರಹಕ್ಕೆ ನೋಟುಗಳಿಂದ ಅಲಂಕರಿಸಲು ನಿರ್ಧರಿಸಿದ್ದರಂತೆ.
ಅದರಂತೆ ಗಣೇಶನಿಗೆ 500, 200,100, 50, 20, 10 ರೂಪಾಯಿ ನೋಟುಗಳನ್ನು ಬಳಸಿ ಅಲಂಕಾರ ಮಾಡಲಾಗಿದೆ. ಆರಂಭದಲ್ಲಿ 21 ಸಾವಿರ ರೂಪಾಯಿಯ ನೋಟುಗಳನ್ನು ಬಳಸಲು ತೀರ್ಮಾನಿಸಲಾಗಿತ್ತು. ಆದರೆ, ಭಕ್ತರು ಹೆಚ್ಚೆಚ್ಚು ಹೊಸ ನೋಟುಗಳನ್ನು ನೀಡುವ ಮೂಲಕ ಸಹಕಾರ ನೀಡಿದ್ದಾರೆ. ಹೀಗಾಗಿ ಸುಮಾರು ಒಂದು ಲಕ್ಷದ 11 ಸಾವಿರದ ನೂರಾ ಒಂದು ರೂಪಾಯಿ ಹಣದಿಂದ ಆಕರ್ಷಕವಾಗಿ ಸಿಂಗರಿಸಲಾಗಿದೆ. 500 ಮುಖಬೆಲೆಯ ನೂರು ನೋಟುಗಳು, 200 ರೂ. ಮುಖಬೆಲೆಯ ನೂರು ನೋಟುಗಳು, 100 ರೂ. ಮುಖಬೆಲೆಯ ನೂರು ನೋಟುಗಳು, 50 ರೂ. ಮುಖಬೆಲೆಯ ನೂರು ನೋಟುಗಳು ಮತ್ತು ಇಪ್ಪತ್ತು ರೂಪಾಯಿಯ 1,300 ನೋಟು ಹಾಗೂ 10 ರೂಪಾಯಿಯ 10 ನೋಟುಗಳಿಂದ ಗಣೇಶ ಕಂಗೊಳಿಸುತ್ತಿದ್ದಾನೆ.
ಇದನ್ನೂ ಓದಿ :ಬೆಳಗಾವಿಯಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುತ್ತಿರುವ ಗಣೇಶ.. ಕುಲಕರ್ಣಿ ಗಲ್ಲಿಯ ಗಣೇಶೋತ್ಸವ ಮಂಡಳಿಯಿಂದ ಸಾಮಾಜಿಕ ಕಳಕಳಿ