ಕರ್ನಾಟಕ

karnataka

ಗಣೇಶನ ನೈವೇದ್ಯಕ್ಕೆ ಇರಿಸಿದ್ದ ಲಡ್ಡು ₹32 ಸಾವಿರಕ್ಕೆ ಹರಾಜು: ವಿಡಿಯೋ

ETV Bharat / videos

ಗಣೇಶನ ನೈವೇದ್ಯಕ್ಕೆ ಇರಿಸಿದ್ದ ಲಡ್ಡು ₹ 32 ಸಾವಿರಕ್ಕೆ ಹರಾಜು: ವಿಡಿಯೋ - ಈಟಿವಿ ಭಾರತ ಕರ್ನಾಟಕ

By ETV Bharat Karnataka Team

Published : Sep 22, 2023, 6:59 PM IST

ತುಮಕೂರು:ಗಣೇಶನ ಹಬ್ಬದ ಪ್ರಯುಕ್ತ ಪಾವಗಡದ ಕಲ್ಮನ್ ಚೆರುವುನಲ್ಲಿ ಪ್ರತಿಷ್ಠಾಪಿಸಲಾದ ಗಣೇಶನ ಮೂರ್ತಿಗೆ ಇರಿಸಲಾಗಿದ್ದ ಲಡ್ಡು ಪ್ರಸಾದ ಹರಾಜು ಕಾರ್ಯಕ್ರಮ ಗುರುವಾರ ನಡೆಯಿತು. ಪ್ರತಿ ವರ್ಷ ಗಣೇಶನ ನೈವೇದ್ಯಕ್ಕಾಗಿ ತಯಾರಿಸಲಾಗುವ ಲಡ್ಡುವನ್ನು ಹರಾಜಿಗೆ ಹಾಕುವುದು ವಾಡಿಕೆಯಾಗಿದೆ. ಗಣೇಶನ ಪ್ರತಿಷ್ಠಾಪನೆ ದಿನ ಈ ಲಡ್ಡು ತಯಾರಿಸಿ ಗಣೇಶನಿಗೆ ನೈವೇದ್ಯಕ್ಕೆ ಇಡಲಾಗುತ್ತದೆ.‌ ಪ್ರತಿ ವರ್ಷವೂ ಗಣೇಶನ ವಿಸರ್ಜನೆಯ ದಿನ ಈ ಲಡ್ಡುವನ್ನು ಹರಾಜು ಹಾಕಲಾಗುತ್ತದೆ.‌ ಗಣೇಶ‌ ಮೂರ್ತಿಗೆ ನೈವೇದ್ಯಕ್ಕೆ ಇರಿಸಲಾಗಿದ್ದ ಲಡ್ಡುವನ್ನು ಪಡೆಯಲು ಕಲ್ಮನ್ ಚೆರುವುವಿನ ಜನರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಪೈಪೋಟಿ ಮೇಲೆ ಹರಾಜು ಕೂಗುತ್ತಾರೆ.

ಗುರುವಾರ ಮಧ್ಯರಾತ್ರಿ 2 ಗಂಟೆವರೆಗೂ ನಡೆದ ಹರಾಜು ಪ್ರಕ್ರಿಯೆಯಲ್ಲಿ ನೈವೇದ್ಯದ ಲಡ್ಡು 32,700 ರೂಪಾಯಿಗೆ ಬಿಕರಿಯಾಗಿದೆ. ಸ್ಥಳೀಯ ನಿವಾಸಿಯಾದ ಗೋಪಾಲಪ್ಪ ಎಂಬುವವರು ಹೆಚ್ಚು ಹರಾಜು ಕೂಗುವ ಮೂಲಕ ನೈವೇದ್ಯದ ಲಡ್ಡನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಹರಾಜಿನಲ್ಲಿ ಜಯಗಳಿಸಿದ ಗೋಪಾಲಪ್ಪ ಅವರನ್ನು ಗಣೇಶ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು. ಲಡ್ಡುವನ್ನು ಪಡೆದ ಗೋಪಾಲಪ್ಪ ಹಾಗೂ ಅವರ ಕುಟುಂಬಸ್ಥರು ಸಂಭ್ರಮಿಸಿದರು.

ಇದನ್ನೂ ಓದಿ:ಹಾವೇರಿ ನಗರದಲ್ಲಿ 25ಕ್ಕೂ ಹೆಚ್ಚು ಗಣೇಶ ಮೂರ್ತಿ ಸ್ಥಾಪನೆ; ಅದ್ಧೂರಿ ಆಚರಣೆ

ABOUT THE AUTHOR

...view details