ಅಂಗಾರಕ ಸಂಕಷ್ಟಿ ಚತುರ್ಥಿ : ಗಜರಾಜನಿಗೆ ವಿಶೇಷ ಪೂಜೆ ಸಲ್ಲಿಸಿದ ಗಾಲಿ ಜನಾರ್ದನ ರೆಡ್ಡಿ - Janardhana Reddy pays worship to elephant
ಬಳ್ಳಾರಿ : ಅಂಗಾರಕ ಸಂಕಷ್ಟ ಚತುರ್ಥಿ ಹಿನ್ನೆಲೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ದಂಪತಿ ಆನೆಗೆ ಸ್ನಾನ ಮಾಡಿಸಿ, ವಿಶೇಷ ಪೂಜೆ ಸಲ್ಲಿಸಿ, ಆಹಾರ ನೀಡಿದ್ರು. ತಮ್ಮ ನಿವಾಸದಲ್ಲಿಂದು ಬೆಳಗ್ಗೆ ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ ಆನೆಗೆ ಸ್ನಾನ ಮಾಡಿಸಿದ್ರು. ಬಳಿಕ ಗಜರಾಜನಿಗೆ ಕಬ್ಬು, ಕಲ್ಲಂಗಡಿ, ಬೆಲ್ಲ, ಬಾಳೆಹಣ್ಣು ಸೇರಿದಂತೆ ಹಲವು ಹಣ್ಣು ಹಂಪಲು, ತಿನಿಸುಗಳನ್ನು ತಿನ್ನಿಸಿದರು. ಇನ್ನೂ ಆನೆ ತನ್ನ ಕಾಲಿನಿಂದ ತೆಂಗಿನಕಾಯಿ ಒಡೆದು ದಂಪತಿಗೆ ನೀಡಿ ಆಶೀರ್ವಾದ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
Last Updated : Feb 3, 2023, 8:22 PM IST