Gaganyaan mission 2023: ಸರ್ವಿಸ್ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಮ್ ಪರೀಕ್ಷೆ ಯಶಸ್ವಿ.. ಮಾಹಿತಿ ಹಂಚಿಕೊಂಡ ಇಸ್ರೋ..
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) Gaganyaan mission 2023 ಮೂಲಕ ಮುಂದಿನ ವರ್ಷ ತನ್ನ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ತಯಾರಿ ನಡೆಸಿದೆ. ಇದಕ್ಕೆ ಪೂರ್ವಭಾಯಿಯಾಗಿ "ಇಸ್ರೋ ಮಹೇಂದ್ರಗಿರಿಯ ಐಪಿಆರ್ಸಿಯಲ್ಲಿ ಗಗನಯಾನ ಸರ್ವಿಸ್ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಮ್ (SMPS) ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಇದು ಆರ್ಬಿಟಲ್ ಮಾಡ್ಯೂಲ್‌ನ ಅವಶ್ಯಕತೆಗಳನ್ನು ಪೂರೈಸುತ್ತದೆ. ಪರೀಕ್ಷೆಯನ್ನು SMPS ನ ಅಂತಿಮ ಸಂರಚನೆಯಲ್ಲಿ ಹಾಟ್ ಟೆಸ್ಟ್ ಅನ್ನು ನಡೆಸಲಾಯಿತು" ಎಂದು ISRO ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
ಭಾರತವು ಈ ವರ್ಷ ಬಾಹ್ಯಾಕಾಶ ಗಗನ್‌ಯಾನ್‌ನಲ್ಲಿ ತನ್ನ ಮೊದಲ ಮಾನವಸಹಿತ ಮಿಷನ್ ಅನ್ನು ಪ್ರಾರಂಭಿಸಬಹುದು. ಈ ನಿಟ್ಟಿನಲ್ಲಿ, ಪ್ರತಿ ಹಂತದಲ್ಲೂ ವಿವರವಾದ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಕಳೆದ ವರ್ಷವೇ ಗಗನಯಾನ ಯೋಜನೆಗೆ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಿತ್ತು. ಇದು ಭಾರತದ ಏಕೈಕ ಬಾಹ್ಯಾಕಾಶ ಮಿಷನ್ ಆಗಿದೆ. ಗಗನಯಾನ ಸ್ಪೇಸ್ ಫ್ಲೈಟ್ ಮಿಷನ್ ಅಡಿಯಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಗಗನಯಾನ ಮಿಷನ್ ಅಡಿಯಲ್ಲಿ, ಇಸ್ರೋ ಗಗನಯಾತ್ರಿಗಳು ಭೂಮಿಯಿಂದ 400 ಕಿ.ಮೀ ಎತ್ತರದ ಬಾಹ್ಯಾಕಾಶದಲ್ಲಿ ಪ್ರಯಾಣಿಸುವಂತೆ ಮಾಡುತ್ತದೆ. ಈ ಕಾರ್ಯಾಚರಣೆಗೆ ಗಗನಯಾತ್ರಿಗಳನ್ನು ಆಯ್ಕೆ ಮಾಡಲು ಇಸ್ರೋ ಭಾರತೀಯ ವಾಯುಪಡೆಗೆ ಕೇಳಿಕೊಂಡಿತ್ತು.
ಇಸ್ರೋದ ಮಹತ್ವಾಕಾಂಕ್ಷೆಯ ಮಿಷನ್‌ಗಳಲ್ಲಿ ಗಗನಯಾನನ ಹೆಸರೂ ಸೇರಿದೆ. ಇದು ಭಾರತದ ಮೊದಲ ಮಾನವಸಹಿತ ಮಿಷನ್ ಆಗಲಿದೆ. ವಾಸ್ತವವಾಗಿ ಗಗನಯಾನ ಮೂರು ಬಾಹ್ಯಾಕಾಶ ಕಾರ್ಯಾಚರಣೆಗಳ ಗುಂಪಾಗಿದೆ. ಇದರಲ್ಲಿ ಎರಡು ಕಾರ್ಯಾಚರಣೆಗಳು ಮಾನವರಹಿತವಾಗಿವೆ ಮತ್ತು ಒಂದು ಮಾನವಸಹಿತ ಮಿಷನ್ ಆಗಿದೆ. ಇಸ್ರೋ ಈ ಕಾರ್ಯದಲ್ಲಿ ವೇಗವಾಗಿ ತೊಡಗಿಸಿಕೊಂಡಿದೆ.
ಈ ಮಿಷನ್ ಭಾಗವಾಗಿ ಮೂವರು ಗಗನಯಾತ್ರಿಗಳನ್ನು ಕಳುಹಿಸಲಾಗುವುದು. ಇದರಲ್ಲಿ ಒಬ್ಬ ಮಹಿಳೆ ಮತ್ತು ಇಬ್ಬರು ಪುರುಷರು ಇರುತ್ತಾರೆ. ಗಗನಯಾನ ಭೂಮಿಯಿಂದ 300 ರಿಂದ 400 ಕಿ.ಮೀ ಎತ್ತರದಲ್ಲಿ ಕಡಿಮೆ ಭೂ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತದೆ. ಇದರ ಉಡಾವಣೆಯೊಂದಿಗೆ, ಭಾರತವು ಈಗಾಗಲೇ ಬಾಹ್ಯಾಕಾಶದಲ್ಲಿ ಮಾನವಸಹಿತ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಮಾಡಿದ ಚೀನಾ, ರಷ್ಯಾ ಮತ್ತು ಅಮೆರಿಕದಂತಹ ದೇಶಗಳ ಪಟ್ಟಿಗೆ ಸೇರಲಿದೆ.
ಓದಿ:ಕ್ರಯೋಜೆನಿಕ್ ತಂತ್ರಜ್ಞಾನದ ಬಗ್ಗೆ ಇಸ್ರೋ ಮಾಜಿ ವಿಜ್ಞಾನಿ ಹೇಳೋದಿಷ್ಟು!