ಮೋದಿ, ಜಿ7 ನಾಯಕರಿಂದ ಹಿರೋಷಿಮಾ ಶಾಂತಿ ಸ್ಮಾರಕಕ್ಕೆ ಪುಷ್ಪ ನಮನ- ವಿಡಿಯೋ - ಜಿ7 ಶೃಂಗಸಭೆ
ಜಪಾನ್: ಜಾಗತಿಕ ಮಹತ್ವದ ಜಿ7 ಶೃಂಗಸಭೆಯಲ್ಲಿ ಭಾಗಿಯಾಗಲು ಜಪಾನ್ ನಗರಿ ಹಿರೋಷಿಮಾಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರೆ ದೇಶಗಳ ನಾಯಕರು ಅಲ್ಲಿನ ಶಾಂತಿ ಸ್ಮಾರಕ ಉದ್ಯಾನವನದಲ್ಲಿ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಯುಎಸ್ ಅಧ್ಯಕ್ಷ ಜೋ ಬೈಡನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಫೋಟೋಗೆ ಪೋಸ್ ನೀಡಿದರು.
ಜಿ7 ಶೃಂಗಸಭೆಯು ಮೇ 19 ರಿಂದ ಪ್ರಾರಂಭವಾಗಿದ್ದು, ಇಂದು ಮುಕ್ತಾಯವಾಗಲಿದೆ. ನಾಯಕರು ಜಾಗತಿಕ ಮಹತ್ವದ ವಿಷಯಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಿದ್ದು ಶಾಂತಿ, ಸ್ಥಿರತೆ ಮತ್ತು ಸುಸ್ಥಿರ ಅಭಿವೃದ್ಧಿ, ಸಮೃದ್ಧಿಯಂತಹ ವಿಷಯಗಳನ್ನು ಚರ್ಚಿಸುತ್ತಿದ್ದಾರೆ. ಜಿ7 ಶೃಂಗಸಭೆ ಮುಕ್ತಾಯದ ಬಳಿಕ ಪಿಎಂ ಮೋದಿ ಪಪುವಾ ನ್ಯೂಗಿನಿ ದೇಶಕ್ಕೆ ತೆರಳುವರು. ಆ ನಂತರ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿ, ಪ್ರಧಾನಿ ಅಲ್ಬನೀಸ್ ಅವರೊಂದಿಗೆ ಮಾತುಕತೆ ನಡೆಸುವ ಕಾರ್ಯಕ್ರಮವಿದೆ.
ಇದನ್ನೂ ಓದಿ :ಜಿ 7 ಶೃಂಗಸಭೆಯಲ್ಲಿ ಭಾಗಿಯಾಗಲು ಜಪಾನ್ಗೆ ತೆರಳಿದ ಪ್ರಧಾನಿ ಮೋದಿ