ಕರ್ನಾಟಕ

karnataka

ಯೋಗ ಅಧಿವೇಶನದಲ್ಲಿ ಪಾಲ್ಗೊಂಡ ಜಿ20 ಪ್ರತಿನಿಧಿಗಳು

ETV Bharat / videos

ಜಿ20 ಪ್ರತಿನಿಧಿಗಳಿಂದ ಯೋಗಾಭ್ಯಾಸ- ವಿಡಿಯೋ - ಜಿ20 ಪ್ರತಿನಿಧಿಗಳು ಯೋಗ ಅಧಿವೇಶನ

By

Published : Apr 2, 2023, 10:05 AM IST

ಪಶ್ಚಿಮ ಬಂಗಾಳ: ಪ್ರಸಕ್ತ ಸಾಲಿನ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿರುವ ಭಾರತ ವಿವಿಧ ರಾಜ್ಯಗಳಲ್ಲಿ ಮಹತ್ವದ ಸಭೆಗಳನ್ನು ಆಯೋಜಿಸುತ್ತಿದೆ. ಅದರಂತೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಜಿ20 ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆ ನಡೆಯುತ್ತಿದ್ದು, ಎರಡನೇ ದಿನವಾದ ಇಂದು ಜಿ20 ಪ್ರತಿನಿಧಿಗಳು ಯೋಗ ಸೆಶನ್‌ನಲ್ಲಿ ಭಾಗವಹಿಸುವ ಮೂಲಕ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮಹತ್ವ ತಿಳಿಸಿದರು.  

ಇದನ್ನೂ ಓದಿ: ಯೋಗ ದಿನಾಚರಣೆಗೆ 100 ದಿನಗಳ ಕೌಂಟ್​ಡೌನ್: 3 ದಿನಗಳ ಯೋಗ ಮಹೋತ್ಸವಕ್ಕೆ ಪ್ರಧಾನಿ ಕರೆ

ಪ್ರತಿ ವರ್ಷ ಜೂನ್ 21 ರಂದು ಅಂತಾರಾಷ್ತ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಯೋಗ ಕೇವಲ ವ್ಯಾಯಾಮವಲ್ಲ, ಮನುಷ್ಯನ ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಉತ್ತಮ ಸಾಧನ. ಯೋಗವು ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ಧೀಕರಿಸಲು ನೆರವಾಗುತ್ತದೆ. ಜೊತೆಗೆ, ಬದುಕು ಬದಲಿಸುವ ಮತ್ತು ಆತ್ಮಾನುಭೂತಿಯ ಸೃಷ್ಟಿಗೂ ಬೇಕು. ದೇಹ, ಚಿಂತನೆ, ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸಬಲ್ಲದು. ಹಾಗೆಯೇ, ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯ ಉಂಟು ಮಾಡಲು ಯೋಗ ಅನುಕೂಲಕರ.  

ಇದನ್ನೂ ಓದಿ:3 ದಶಕದ ಹಿಂದೆ ಸನ್ಯಾಸತ್ವ ಸ್ವೀಕರಿಸಿದ್ದ ವಿಡಿಯೋ ಹಂಚಿಕೊಂಡ ಬಾಬಾ ರಾಮ್​ದೇವ್​​

ABOUT THE AUTHOR

...view details