ವಿಜಯಪುರದಲ್ಲಿ ಫಲಪುಷ್ಪ ಪ್ರದರ್ಶನ: ಮನಸೆಳೆದ ಸಿದ್ದೇಶ್ವರ ಶ್ರೀಗಳ ಪ್ರತಿಕೃತಿ - ಈಟಿವಿ ಭಾರತ ಕನ್ನಡ
ವಿಜಯಪುರ:ತೋಟಗಾರಿಕೆ ಇಲಾಖೆ ವತಿಯಿಂದ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಲಿಂ.ಸಿದ್ದೇಶ್ವರ ಶ್ರೀಗಳ ಪ್ರತಿಕೃತಿ ವಿಶೇಷವಾಗಿ ಗಮನ ಸೆಳೆಯಿತು. ಶ್ರೀಗಳ ಬಾಲ್ಯದಿಂದ ಅಂತ್ಯದವರೆಗಿನ ಎಲ್ಲಾ ಭಾವಚಿತ್ರಗಳನ್ನು ಬಿಡಿಸಿಸಿ ಬ್ಯಾಂಕ್ ಸಿಬ್ಬಂದಿ ತಯಾರು ಮಾಡಿದ್ದರು. ಕಲ್ಲಂಗಡಿಯಲ್ಲಿಯೂ ಅವರ ಭಾವಚಿತ್ರವನ್ನು ಅರಳಿಸಲಾಗಿತ್ತು. ಜ್ಞಾನಯೋಗಾಶ್ರಮದ ಪ್ರಣವ ಮಂಟಪವನ್ನು ಇಲ್ಲಿ ನಿರ್ಮಿಸಲಾಗಿತ್ತು. ಹತ್ತು ಹಲವು ಮೂರ್ತಿಗಳು ಹೂವು, ಹಣ್ಣುಗಳಿಂದ ತಯಾರಾಗಿದ್ದು ಜನಮನ ಸೆಳೆಯಿತು.
Last Updated : Feb 3, 2023, 8:39 PM IST