Free Bus : ಕಂಡಕ್ಟರ್ ಗೆಟಪ್ನಲ್ಲಿ ಕಾಣಿಸಿಕೊಂಡ ಹೊನ್ನಾಳಿ ಶಾಸಕ ಡಿ ಜಿ ಶಾಂತನಗೌಡ - ಈಟಿವಿ ಭಾರತ್ ಕರ್ನಾಟಕ
ದಾವಣಗೆರೆ :ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ಶಕ್ತಿ ಯೋಜನೆ ಚಾಲನೆ ದಿನದಂದು ಸಿಎಂ ಸಿದ್ದರಾಮಯ್ಯ ಕೆಲ ಕಾಲ ಸರ್ಕಾರಿ ಸಾರಿಗೆ ಬಸ್ನಲ್ಲಿ ಟಿಕೆಟ್ ನೀಡುವ ಮೂಲಕ ಕೆಲಹೊತ್ತು ನಿರ್ವಾಹಕರಾಗಿದ್ದರು. ಅದೇ ರೀತಿ ಹೊನ್ನಾಳಿ ಶಾಸಕ ಡಿ ಜಿ ಶಾಂತನಗೌಡ ಕೂಡ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತಲೆಗೊಂದು ಟೋಪಿ, ಕೊರಳಲ್ಲಿ ಬ್ಯಾಗ್, ಬಾಯಿಯಲ್ಲಿ ವಿಶಲ್ ಊದುತ್ತ ನಿರ್ವಾಹಕನ ಸಮವಸ್ತ್ರ ತೊಟ್ಟು ಶಾಂತನಗೌಡ ನಿರ್ವಾಹಕರಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಮೇ 11 ರಂದು ಭಾನುವಾರ ಶಕ್ತಿ ಯೋಜನೆಗೆ ಹೊನ್ನಾಳಿಯಲ್ಲಿ ಚಾಲನೆ ನೀಡಿದ್ದ ಶಾಂತನಗೌಡ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಬಸ್ ದ್ವಾರದಲ್ಲಿ ನಿಂತು ಯಾರ್ ರೀ ಸವಳಂಗ.. ಸವಳಂಗ.. ಫ್ರೀ ಬನ್ನಿ ಬನ್ನಿ ಎಂದು ಶಾಂತನಗೌಡ ಶಕ್ತಿ ಯೋಜನೆಯನ್ನು ಪ್ರಚಾರ ಮಾಡಿದ್ದಾರೆ. ಹೀಗೆ ಫ್ರೀ ಫ್ರೀ ಎಂದು ಬಸ್ ನಿಲ್ದಾಣಗಳಲ್ಲಿ ನಿಂತಿದ್ದ ಮಹಿಳೆಯರನ್ನು ಕರೆದು ಇಡೀ ಹೊನ್ನಾಳಿಯನ್ನು ಶಾಸಕರು ಬಸ್ನಲ್ಲಿ ಒಂದು ಸುತ್ತು ಹಾಕಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.