ಕರ್ನಾಟಕ

karnataka

ಮುಖ್ಯಮಂತ್ರಿ ಸಿದ್ದರಾಮಯ್ಯ

ETV Bharat / videos

ನಾಡಿನ ಎಲ್ಲಾ ಜನತೆಗೂ ಜಾತಿ, ಮತ, ಧರ್ಮ ಭೇದವಿಲ್ಲದೆ ಉಚಿತ 200 ಯೂನಿಟ್ ವಿದ್ಯುತ್ ಜಾರಿ : ಸಿಎಂ - ಮುಖ್ಯಮಂತ್ರಿ ಸಿದ್ದರಾಮಯ್ಯ

By

Published : Jun 2, 2023, 4:50 PM IST

Updated : Jun 2, 2023, 7:38 PM IST

ಬೆಂಗಳೂರು :ಕಾಂಗ್ರೆಸ್ ಪಕ್ಷ ಚುನಾವಣಾ ಹೊತ್ತಿನಲ್ಲಿ ನೀಡಿದ್ದ ಗ್ಯಾರಂಟಿ ಕಾರ್ಡ್​ಗಳನ್ನು ಕಾರ್ಯಕರ್ತರ ಮೂಲಕ ಹಂಚುವ ಕೆಲಸ ಮಾಡಲಾಗಿತ್ತು. ಬಳಿಕ ಅವತ್ತೇ ನಾವು ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಐದು ಗ್ಯಾರಂಟಿ ಜಾರಿ ಮಾಡುವುದಾಗಿ ಹೇಳಿದ್ದೆವು. ಇದರ ಬೆನ್ನಲೇ ಇಂದು ಐದು ಗ್ಯಾರಂಟಿಗಳ ಬಗ್ಗೆ ವಿಶೇಷ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದು, ಐದು ಗ್ಯಾರಂಟಿ ಯೋಜನೆಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೆ ತರುವ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗೃಹಜ್ಯೋತಿ ಯೋಜನೆ : ಜಾತಿ, ಮತ, ಧರ್ಮ ಭೇದ-ಭಾವವಿಲ್ಲದೆ ನಾಡಿನ ಪ್ರತಿ ಕುಟುಂಬಕ್ಕೆ 200  ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಜಾರಿ ಮಾಡಲಾಗಿದೆ. ಪ್ರತಿ ವರ್ಷ ಅಂದರೆ 12 ತಿಂಗಳ ಸರಾಸರಿ ಆಧಾರದ ಮೇಲೆ ಆ ಮನೆಗೆ ಫ್ರೀ ವಿದ್ಯುತ್​​ ನಿರ್ಧಾರ ಮಾಡಲಾಗಿದ್ದು, ನೀವು ಸರಾಸರಿ 70 ಯೂನಿಟ್ ವಿದ್ಯುತ್​​ ಬಳಸಿದ್ದರೆ, ಅಥವಾ ಒಬ್ಬ 199 ಯೂನಿಟ್​​​ ಖರ್ಚು ಮಾಡಿದ್ದರೆ, ಅಂದರೆ 12 ತಿಂಗಳ ಸರಾಸರಿ ಮೇಲೆ 10 ರಷ್ಟು ಹೆಚ್ಚುವರಿ ಯೂನಿಟ್​​​​​ ವರೆಗೂ ಫ್ರೀ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.​​​​ 

ಆತ ಬಳಿಸಿದ ಸರಾಸರಿ ಮೇಲೆ ಶೇ 10 ರಷ್ಟು ಹೆಚ್ಚುವರಿ ಯೂನಿಟ್​​ ಮೇಲೆ ಫ್ರೀ ಇದ್ದು, 200 ಯೂನಿಟ್​​​​​ಗಳ ಒಳಗೆ ಇದ್ದರೆ ಉಚಿತ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಜುಲೈ 1 ರಿಂದ ಆಗಸ್ಟ್​ ತಿಂಗಳವರೆಗೂ ಏನ್​ ಖರ್ಚು ಮಾಡುತ್ತಾರೆ ಅಲ್ಲಿಂದ ವಿದ್ಯುತ್​ ಫ್ರೀ ಎಂದು ಸಿಎಂ ತಿಳಿಸಿದ್ದಾರೆ.

ಇದನ್ನೂ ಓದಿ :ಎಲ್ಲರಿಗೂ 200 ಯೂನಿಟ್​ ಫ್ರೀ ವಿದ್ಯುತ್​​​ .. ಗೃಹ ಲಕ್ಷ್ಮಿ ಆಗಸ್ಟ್​ 15ರಿಂದ ಜಾರಿ.. ಮಹಿಳೆಯರಿಗೆ ಜೂನ್​ 11 ರಿಂದ ಬಸ್​​ ಫ್ರೀ!

Last Updated : Jun 2, 2023, 7:38 PM IST

ABOUT THE AUTHOR

...view details