ಕರ್ನಾಟಕ

karnataka

ಮದ್ದೂರಿನ ಶಿಂಷಾ ನದಿ ಬಳಿ 4 ಕಾಡಾನೆಗಳು ಪತ್ತೆ

ETV Bharat / videos

Video of Elephants: ಬೆಳ್ಳಂಬೆಳಗ್ಗೆ ಶ್ರೀ ಹೊಳೆಆಂಜನೇಯ ಸ್ವಾಮಿ ದರ್ಶನ ಪಡೆದ ಗಜಪಡೆ - ಶ್ರೀ ಹೊಳೆ ಆಂಜನೇಯ ಸ್ವಾಮಿ

By

Published : Jul 30, 2023, 2:18 PM IST

ಮಂಡ್ಯ :ಇಂದು ಬೆಳ್ಳಂ ಬೆಳಗ್ಗೆ ಗಜಪಡೆ ಮದ್ದೂರು ಪಟ್ಟಣದ ಶ್ರೀ ಹೊಳೆಆಂಜನೇಯ ಸ್ವಾಮಿ ದರ್ಶನ ಪಡೆದವು. ರಾಮನಗರ ಜಿಲ್ಲೆಯ ತೆಂಗನಕಲ್ಲು ಅರಣ್ಯ ಪ್ರದೇಶದಿಂದ ಕೊಂಬಿನಕಲ್ಲು ಅರಣ್ಯ ಪ್ರದೇಶದ ಮೂಲಕ ರಾತ್ರಿ ದಾರಿ ತಪ್ಪಿ ಮದ್ದೂರು ಪಟ್ಟಣದ ಶಿಂಷಾ ನದಿಯಲ್ಲಿ ನಾಲ್ಕು ಕಾಡಾನೆಗಳು ಬೀಡು ಬಿಟ್ಟಿವೆ.

ಇದನ್ನೂ ಓದಿ : ದೇವಸ್ಥಾನ, ಮನೆಗಳಿಗೆ ನುಗ್ಗಿದ ಕಾಡಾನೆ.. ಅಪಾರ ಹಾನಿ, ಆತಂಕದಲ್ಲಿ ಜನರು... ವಿಡಿಯೋ ವೈರಲ್

ಬೆಳಗ್ಗೆ ದೇಗುಲಕ್ಕೆ ಆಗಮಿಸಿದ ಭಕ್ತರು ಗಜಪಡೆ ಕಂಡು ಗಾಬರಿಗೊಂಡು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಆಡಳಿತ ಮಂಡಳಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ದೌಡಾಯಿಸಿದ ವಲಯ ಅರಣ್ಯಾಧಿಕಾರಿ ಗವಿಯಪ್ಪ ಹಾಗೂ ಇತರೆ ಸಿಬ್ಬಂದಿ ಆ ಪ್ರದೇಶದಲ್ಲೇ ಬೀಡು ಬಿಟ್ಟಿದ್ದಾರೆ. ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಮತ್ತು ಮದ್ದೂರು ಪಟ್ಟಣದ ಕಡೆಗೆ ಗಜಪಡೆ ತೆರಳದಂತೆ ಕಾವಲು ಕಾಯುತ್ತಿದ್ದಾರೆ.

ಇದನ್ನೂ ಓದಿ :ವಿರಾಜಪೇಟೆ ಜನರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆ.. ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಸಕ್ಸಸ್​

ABOUT THE AUTHOR

...view details