ಕರ್ನಾಟಕ

karnataka

ಹೆದ್ದಾರಿಯಲ್ಲಿ ಅಡ್ಡಗಟ್ಟಿ ನಾಲ್ಕೂವರೆ ಕೋಟಿ ಲೂಟಿ

ETV Bharat / videos

ಹೆದ್ದಾರಿಯಲ್ಲಿ ಅಡ್ಡಗಟ್ಟಿ ನಾಲ್ಕೂವರೆ ಕೋಟಿ ರೂ. ಲೂಟಿ.. ಐವರ ಬಂಧನ - ETV Bharath Kannada news

By ETV Bharat Karnataka Team

Published : Sep 8, 2023, 10:52 PM IST

ವಾರ್ಧಾ(ಮಹಾರಾಷ್ಟ್ರ): ನಾಗ್ಪುರದಿಂದ ಹೈದರಾಬಾದ್‌ಗೆ ನಗದು ಸಾಗಿಸುತ್ತಿದ್ದ ಕಂಪನಿಯೊಂದರ ಉದ್ಯೋಗಿಯನ್ನು ದರೋಡೆ ಮಾಡಿರುವ ಘಟನೆ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್ ಹೆದ್ದಾರಿಯ ವಡ್ನೇರ್ ಸಮೀಪದ ಪೋಹ್ನಾದಲ್ಲಿ ಕಾರು ನಿಲ್ಲಿಸಿ ಸುಮಾರು ನಾಲ್ಕೂವರೆ ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ ಎಂದು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ 15 ತಂಡಗಳಾಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆಪ್ಟೆಂಬರ್​ 13ರ ವರೆಗೆ ಐವರನ್ನು ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. ಬಂಧಿತರಿಂದ 3 ಕೋಟಿ 46 ಲಕ್ಷ ರೂಪಾಯಿ, ಅಪರಾಧಕ್ಕೆ ಬಳಸಿದ ಆಯುಧ, ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.  

ಕಂಪನಿಯ ನಗದು ಎಂದು ಹೇಳಲಾಗುತ್ತಿರುವ ನಾಲ್ಕೂವರೆ ಕೋಟಿ ರೂಪಾಯಿ ಗುಜರಾತ್ ಮೂಲದ ಕಮಲೇಶ್ ಶಾ ಎಂಬ ವ್ಯಕ್ತಿ ಅತ್ತೇಸಿಂಗ್ ಭಗವಾಂಜಿ ಸೋಲಂಕಿ ನೀಡಿದ್ದರು ಎಂದು ಹೇಳಲಾಗಿದೆ. ಈಗ ಈ ಕಮಲೇಶ್ ಶಾ ಯಾರು? ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಗುಜರಾತ್‌ನಲ್ಲಿ ನೆಲೆಸಿರುವ ಅತ್ತೇಸಿಂಗ್ ಭಗವಾಂಜಿ ಸೋಲಂಕಿ ಅವರು ವಡ್ನರ್ ರಸ್ತೆಯಲ್ಲಿ ಕಾರಿನಲ್ಲಿ ಹೈದರಾಬಾದ್‌ಗೆ ಹೋಗುತ್ತಿದ್ದಾಗ ಹೋಂಡಾ ಸಿಟಿಯಿಂದ ಬರುತ್ತಿದ್ದ ಆರೋಪಿಗಳು ಕಾರನ್ನು ತಡೆದಿದ್ದಾರೆ. ಬಂದೂಕು ತೋರಿಸಿ ನಾಲ್ಕೂವರೆ ಕೋಟಿಯಷ್ಟು ನಗದನ್ನು ದೋಚಲಾಗಿತ್ತು. 

ಇದನ್ನೂ ಓದಿ:ಟೆಲಿಗ್ರಾಂನಲ್ಲಿ ವಂಚನೆ: ಸೈಬರ್ ಗ್ಯಾಂಗ್ ಬೇಧಿಸಿದ ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರು

ABOUT THE AUTHOR

...view details