ಸೋಲಿನಿಂದ ಮನಸ್ಸು ಕಲ್ಲಾಗಿದೆ, ಇನ್ಮುಂದೆ ಯಾರದ್ದೇ ಮದುವೆಗೆ ಬಂದರೂ ಮುಯ್ಯಿ ಹಾಕಲ್ಲ; ಮಾಜಿ ಶಾಸಕ ಸುರೇಶ್ ಗೌಡ - ಮದುವೆಗೆ ಬಂದರೂ ಮುಯ್ಯಿ ಹಾಕಲ್ಲ
ಮಂಡ್ಯ :ಇನ್ನು ಮುಂದೆ ಯಾರು ಕೂಡ ನನ್ನ ಬಳಿ ಸಹಾಯ ಕೇಳಿ ಬರಬೇಡಿ. ನಾನು ಯಾವುದಾದರೂ ಮದುವೆಗೆ ಬಂದರೂ ಮುಯ್ಯಿ ಕೂಡ ಹಾಕಲ್ಲ ಎಂದು ಚುನಾವಣೆ ಸೋಲಿನ ಬಳಿಕ ಅಸಮಾಧಾನಗೊಂಡಿರುವ ಮಾಜಿ ಶಾಸಕ ಸುರೇಶ್ ಗೌಡ ಹೇಳಿಕೆ ಕೊಟ್ಟಿದ್ದಾರೆ. ಬುಧವಾರ ಮದ್ದೂರು ಕ್ಷೇತ್ರದ ಕೊಪ್ಪದಲ್ಲಿ ನಡೆದ ಕೃತಜ್ಞತಾ ಸಭೆ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.
ನಾನು ಯಾರನ್ನು ತುಂಬ ನಂಬಿದ್ದೆನೋ ಅವರಿಂದಲೇ ನನಗೆ ಮೋಸ ಆಗಿದೆ. ನಾನೀಗ ಸೋತಿದ್ದೇನೆ. ಈ ಬಾರಿ ವಿಧಾನಸಭಾ ಚುನಾವಣೆ ಸೋಲಿನಿಂದ ಬೇಜಾರಾಗಿ ನನ್ನ ಮನಸ್ಸು ಕಲ್ಲಾಗಿದೆ. ಹೀಗಾಗಿ ವೈಯಕ್ತಿಕ ಕಷ್ಟ ಹೇಳಿಕೊಂಡು ಯಾರು ಕೂಡ ನನ್ನ ಬಳಿ ಬರಬೇಡಿ. ಇನ್ನು ಮುಂದೆ ಯಾವುದೇ ಮದುವೆಗೆ ಬಂದರು ಮುಯ್ಯಿ ಹಾಕಲ್ಲ. ನಾನೀಗ ಚುನಾವಣೆ ಸೋತು ಕಷ್ಟದಲ್ಲಿದ್ದೇನೆ. ಆದರೂ ಬಂದು ಸಹಾಯ ಕೇಳುತ್ತೀರಾ ಎಂದು ಸೋಲಿನ ಬೇಸರದಲ್ಲಿ ಮತದಾರರ ಮೇಲೆ ಸುರೇಶ್ ಗೌಡ ಅವರು ಮುನಿಸಿಕೊಂಡಿದ್ದಾರೆ.
ಇದನ್ನೂ ಓದಿ :ಭಾಷಣಕ್ಕೆ ಅಡ್ಡಿಪಡಿಸಿದ ಕಾರ್ಯಕರ್ತನ ವಿರುದ್ಧ ಗರಂ ಆದ ಆಯನೂರು ಮಂಜುನಾಥ್