ಕರ್ನಾಟಕ

karnataka

ಸಿದ್ದರಾಮಯ್ಯರವರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೋ ಅಲ್ಲಿ ಈಶ್ವರಪ್ಪನವರು ಸ್ಪರ್ಧಿಸಲಿ: ಕೆ ಬಿ ಪ್ರಸನ್ನ ಕುಮಾರ್

ETV Bharat / videos

ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೋ ಅಲ್ಲಿ ಈಶ್ವರಪ್ಪನವರು ಸ್ಪರ್ಧಿಸಲಿ: ಕೆ ಬಿ ಪ್ರಸನ್ನ ಕುಮಾರ್ - etv bharat kannada

By

Published : Mar 1, 2023, 8:34 PM IST

ಶಿವಮೊಗ್ಗ:ಶಾಸಕ ಈಶ್ವರಪ್ಪರವರು ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೋ ಅಲ್ಲಿ ಹೋಗಿ ಸ್ಪರ್ಧಿಸಿ ಗೆದ್ದು ಬರಲಿ ಎಂದು ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ಸವಾಲು ಹಾಕಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40 ಪರ್ಸಂಟ್  ಈಶ್ವರಪ್ಪ  ನಮ್ಮ ಸಿಎಲ್​ಪಿ ನಾಯಕ ಸಿದ್ಧರಾಮಯ್ಯರಿಗೆ ಶಿವಮೊಗ್ಗಕ್ಕೆ ಬಂದು ಚುನಾವಣೆಗೆ ನಿಲ್ಲಿ ಎಂದು ಕರೆದಿದ್ದಾರೆ ಎಂದರು.

ಇಲ್ಲಿ ಪಕ್ಷದ ಸಾಮನ್ಯ ಕಾರ್ಯಕರ್ತರು ಯಾರಾದರೂ ನಿಲ್ಲುತ್ತೇವೆ. 40 ಪರ್ಸಂಟ್ ಈಶ್ವರಪ್ಪಗೆ ನಮ್ಮದು ಒಂದು ಸವಾಲಿದೆ. ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೋ ಅಲ್ಲಿ ಹೋಗಿ ಸ್ಪರ್ಧಿಸಿ ಗೆದ್ದು ತೋರಿಸಲಿ. ಇವರ ಬಳಿ  40 ಪರ್ಸಂಟ್ ಹಣ ತುಂಬಾ ಇದೆ, ಆದ್ದರಿಂದ ಏನು ಬೇಕಾದರೂ, ಯಾರ ಬಗ್ಗೆಯಾದರೂ ಮಾತನಾಡುತ್ತಿದ್ದಾರೆ. ಇವರ ಬಗ್ಗೆ ರಾಜ್ಯಾದ್ಯಂತ ಪ್ರಚಾರ ಆಗಿದೆ, ಇವರು ಶಿವಮೊಗ್ಗಕ್ಕೆ ಮಾತ್ರ ಸಿಮೀತ ಅಲ್ಲ ರಾಜ್ಯಾದ್ಯಂತ 40 ಪರ್ಸಂಟ್ ಹಣ ಪಡೆದಿದ್ದಾರೆ ಅವರು ಸಿದ್ದರಾಮಯ್ಯ ಅವರ ವಿರುದ್ಧ ನಿಂತು ಗೆದ್ದು ತೋರಿಸಲಿ ಎಂದು ಸಾವಲು ಹಾಕಿದರು.

ಇದನ್ನೂ ಓದಿ:ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ: ಕೇಂದ್ರದ ವಿರುದ್ಧ ಕಾಂಗ್ರೆಸ್ ವಿನೂತನ ಪ್ರತಿಭಟನೆ

ABOUT THE AUTHOR

...view details