ಎಲ್ಲಿ ಹನುಮನೋ ಅಲ್ಲೇ ರಾಮನು.. ಜನಾರ್ದನ ರೆಡ್ಡಿ ಮಾತಿನ ಮರ್ಮವೇನು? - ಈಟಿವಿ ಭಾರತ ಕನ್ನಡ ನ್ಯೂಸ್
ಗಂಗಾವತಿ(ಕೊಪ್ಪಳ): ತನಗಿಂತಲೂ ಹನುಮನೇ ಚೆನ್ನಾಗಿರಬೇಕೆಂದು ಶ್ರೀರಾಮ ಬಯಸುತ್ತಾನೆ. ಹೀಗಾಗಿ ಹನುಮ ಇದ್ದಲ್ಲಿ ಶ್ರೀರಾಮ ಮತ್ತೆ ಬಂದೇ ಬರುತ್ತಾನೆ. ಇದಕ್ಕಾಗಿ ಸ್ಪಲ್ಪ ಕಾಯಬೇಕು ಎಂದು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಹೇಳಿದ್ದಾರೆ. ಸಚಿವ ಶ್ರೀರಾಮುಲು ಮತ್ತು ತಮ್ಮ ಮಧ್ಯೆ ಇರುವ ಸ್ನೇಹ ಸಂಬಂಧ ಇತ್ಯರ್ಥವಾಗಿಲ್ಲ. ಮತ್ತೆ ಶ್ರೀರಾಮುಲು ತಮ್ಮೊಂದಿಗೆ ಬರುತ್ತಾರೆ ಎಂದು ರೆಡ್ಡಿ ಸೂಚ್ಯವಾಗಿ ಹೇಳಿರುವುದು ಇದೀಗ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಂಜನಾದ್ರಿಯ ಹನುಮ ಜನ್ಮ ಭೂಮಿ ವಿಚಾರದಲ್ಲಿ ಈ ಕ್ಷೇತ್ರ ಅಯೋಧ್ಯೆಯ ರಾಮಜನ್ಮ ಭೂಮಿ ಮಾದರಿಯಲ್ಲಿ ಅಭಿವೃದ್ಧಿಯಾಗಬೇಕೆಂದು ಬಯಸಿದ್ದೆ. ನಾನು ಅಧಿಕಾರದಲ್ಲಿದ್ದಾಗ ಈ ಬಗ್ಗೆ ಸ್ವತಃ ಆಗಿನ ಸಿಎಂ ಜೊತೆ ಚರ್ಚೆ ನಡೆಸಿದ್ದೆ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಯೋಜನೆಗಳಿವೆ. ಅವಕಾಶ ಸಿಕ್ಕಲ್ಲಿ ಅವುಗಳನ್ನು ಜಾರಿಗೆ ತರುತ್ತೇನೆ ಎಂದು ಇದೇ ವೇಳೆ ಜನಾರ್ದನ ರೆಡ್ಡಿ ಹೇಳಿದ್ದಾರೆ.
Last Updated : Feb 3, 2023, 8:38 PM IST