Congress Protest: ಬಿಜೆಪಿಯವರೇನು ಅವರ ಮನೆಯಿಂದ ತಂದು ಅಕ್ಕಿ ಕೊಡ್ತಾರಾ?- ಕಿಮ್ಮನೆ ರತ್ನಾಕರ್ - ಕಿಮ್ಮನೆ ರತ್ನಾಕರ್
ಶಿವಮೊಗ್ಗ: ಬಿಜೆಪಿ ಪಕ್ಷದವರೇನು ಅವರ ಮನೆಯಿಂದ ತಂದು ಅಕ್ಕಿ ಕೊಡುತ್ತಾರಾ? ಕೇಂದ್ರ ಸರ್ಕಾರ ಅಂದ್ರೆ ಅವರ ಮನೆ ಅಲ್ಲ, ರಾಜ್ಯದ ಜನರ ಅಕ್ಕಿ ಎಂದು ಬಿಜೆಪಿ ನಾಯಕರ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾರಿಹಾಯ್ದರು. ರಾಜ್ಯಕ್ಕೆ ನೀಡುವ ಅಕ್ಕಿಯಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿ ನಗರದ ಶಿವಪ್ಪನಾಯಕನ ವೃತ್ತದ ಬಳಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯಕ್ಕೆ 5 ಕೆಜಿ ಕೇಂದ್ರದಿಂದ ಕೊಡುತ್ತಿರುವ ಅಕ್ಕಿ ಮೋದಿಯವರ ಮನೆಯದಾಗಲಿ ಬಿಜೆಪಿಯವರ ಮನೆಯವರದಾಗಲಿ ಅಲ್ಲ, ದೇಶದ ಜನರದ್ದು ಎಂದು ಟಾಂಗ್ ನೀಡಿದರು. ರಾಜ್ಯದ ಜನಪರ ಯೋಜನೆಗೆ ಕೇಂದ್ರ ಸರ್ಕಾರ ಈ ರೀತಿಯ ಧೋರಣೆ ಮಾಡಬಾರದು. ಹೀಗೆ ಮಾಡಿದರೆ ದೇಶ ಉಳಿಯುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕ ಆರ್. ಪ್ರಸನ್ನ ಕುಮಾರ್, ಕಾಂಗ್ರೆಸ್ ಮುಖಂಡ ಹೆಚ್.ಸಿ ಯೋಗೇಶ್, ಶ್ರೀನಿವಾಸ್ ಕರಿಯಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಅನೀತ ಕುಮಾರಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ:Congress Protest: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಕರ ಪ್ರತಿಭಟನೆ.. ವಿಡಿಯೋ