ಹಾಸನ ಅಭ್ಯರ್ಥಿ ತೀರ್ಮಾನ ಪಕ್ಷಕ್ಕೆ ಬಿಟ್ಟಿದ್ದು: ಮಾಜಿ ಸಚಿವ ರೇವಣ್ಣ - etv bharat kannada
ತುಮಕೂರು: "ಹಾಸನ ಜಿಲ್ಲೆಯಲ್ಲಿ ಕ್ಷೇತ್ರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಣ್ಣ ಏನು ಹೇಳ್ತಾರೋ ಅದನ್ನೇ ನಾವು ಕೇಳ್ತೀವಿ" ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ತಿಳಿಸಿದ್ದಾರೆ. ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ಮಾತನಾಡಿದ ಅವರು, "ಹಾಸನ ಜಿಲ್ಲೆಯಲ್ಲಿ ಏನೂ ತೊಂದರೆಯಾಗಲ್ಲ. ಭವಾನಿ ರೇವಣ್ಣರ ಸ್ಪರ್ಧೆ ವಿಚಾರದಲ್ಲಿ ಯಾರನ್ನು ನಿಲ್ಲಿಸಬೇಕು ಎಂದು ಪಕ್ಷ ತೀರ್ಮಾನ ಮಾಡುತ್ತದೆ" ಎಂದರು.
ಬ್ರಾಹ್ಮಣರ ವಿರುದ್ದ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸದ ಅವರು, "ನಾವು ಶೃಂಗೇರಿ ಗುರುಗಳ ಮಹಾನ್ ಭಕ್ತರು. ಕುಮಾರಸ್ವಾಮಿ, ದೇವೇಗೌಡರು ಸೇರಿದಂತೆ ನಾವೆಲ್ಲರೂ ಪೂಜ್ಯರ ಮೇಲೆ ಸಾಕಷ್ಟು ಗೌರವವನ್ನು ಇಟ್ಟಿದ್ದೇವೆ. ಅಲ್ಲದೇ ಶೃಂಗೇರಿ ಬ್ರಾಹ್ಮಣ ಸಮುದಾಯಕ್ಕೆ 25 ಕೋಟಿ ಕುಮಾರಸ್ವಾಮಿಯವರು ಕೊಟ್ಟಿದ್ರು, ಬೇರೆ ಯಾವ ರಾಷ್ಟ್ರೀಯ ಪಕ್ಷವೂ ಕೊಟ್ಟಿಲ್ಲ" ಎಂದು ಹೇಳಿದರು.
ಇದನ್ನೂ ಓದಿ:ಡಿ.ಕೆ ಶಿವಕುಮಾರ್ ಶ್ಲಾಘಿಸಿದ ಸುಧಾಕರ್: ಸಚಿವರಿಂದ ಡಿ.ಕೆ ಬ್ರದರ್ಸ್ ಗುಣಗಾನ