ಕರ್ನಾಟಕ

karnataka

ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನದ ಜನತೆಗೂ ಮೋದಿ ಆಡಳಿತ ಬೇಕು: ಲಕ್ಷ್ಮಣ ಸವದಿ

ETV Bharat / videos

ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನದ ಜನತೆಗೂ ಮೋದಿ ಆಡಳಿತ ಬೇಕು: ಲಕ್ಷ್ಮಣ ಸವದಿ - ಈಟಿವಿ ಭಾರತ ಕನ್ನಡ

By

Published : Mar 21, 2023, 12:52 PM IST

ವಿಜಯಪುರ : "ಪ್ರಧಾನಿ ನರೇಂದ್ರ ಮೋದಿ ಎಂದರೆ ಜಗತ್ತಿನ ದೊಡ್ಡಣ್ಣನಿಂದ ಹಿಡಿದು ಎಲ್ಲ ದೇಶ ನಾಗರೀಕರಿಗೆ ಅಚ್ಚುಮೆಚ್ಚು. ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನದಲ್ಲಿಯೂ ಬಿಜೆಪಿ ಬಾವುಟ ಹಾರಾಡಿದ್ದನ್ನು ಮಾಧ್ಯಮದಲ್ಲಿ ನೋಡಿದ್ದೆ. ಇದು ಪಾಕಿಸ್ತಾನದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಬೇಕು ಹಾಗೂ ಮೋದಿಯಂತಹ ನಾಯಕ ಬೇಕು ಎನ್ನುವುದನ್ನು ಅಲ್ಲಿಯ ಜನ ಬಯಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ" ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ವಿಜಯಪುರ ತಾಲೂಕಿನ‌ ನಾಗಠಾಣದಲ್ಲಿ ಸೋಮವಾರ ನಡೆದ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಈ ಮೊದಲು ಭಾರತವನ್ನು ಭಿಕ್ಷುಕರ, ಬಡವರ ದೇಶ ಎಂದು ಹೀಯಾಳಿಸುತ್ತಿದ್ದರು. ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಮೇಲೆ ಅಮೆರಿಕ ಕೂಡಾ ಗೌರವ ನೀಡುತ್ತಿದೆ. ನಮ್ಮ ಪ್ರಧಾನಿಯವರ ನೀತಿಯನ್ನು ಬೇರೆ ರಾಷ್ಟ್ರಗಳು ಕೂಡಾ ಅಳವಡಿಸಿಕೊಳ್ಳುತ್ತಿವೆ" ಎಂದು ಹೇಳಿದರು.

"ನಮ್ಮ ನಾಲ್ಕನೇ ತಂಡದ ಕೊನೆಯ ಮತಕ್ಷೇತ್ರ ಇಂಡಿಯಲ್ಲಿ ಯಾತ್ರೆ ಕೊನೆಗೊಳ್ಳುತ್ತಿದ್ದು, 25ರಂದು ದಾವಣಗೆರೆಯಲ್ಲಿ ವಿಜಯಸಂಕಲ್ಪ ಯಾತ್ರೆಯ ಮಹಾಸಂಗಮ ಕಾರ್ಯಕ್ರಮ ನಡೆಯಲಿದೆ. ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆ" ಎಂದರು.

"2023ರಲ್ಲಿ ರಾಜ್ಯದಲ್ಲಿ ಹಾಗೂ 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಹಾಗೂ ಜನರು ಸಂಕಲ್ಪ ಮಾಡುವ ಯಾತ್ರೆ ಇದಾಗಿದೆ. ಮೇ ತಿಂಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಂಕಣಬದ್ಧರಾಗಿರಬೇಕು" ಎಂದು ಕರೆ ನೀಡಿದರು.

ಇದನ್ನೂ ಓದಿ :'ಯಾರು ಏನೇ ಹೇಳಲಿ, ಈ ಬಾರಿ ಗೆಲುವು ನನ್ನದೇ': ಸಿನಿಮಾ ಶೈಲಿಯಲ್ಲಿ ಸಚಿವ ಹೆಬ್ಬಾರ್ ವಿಶ್ವಾಸ

ABOUT THE AUTHOR

...view details