ಟಿಕೆಟ್ ಕೇಳುವ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಮುಂದಾದ ಲಕ್ಷ್ಮಣ ಸವದಿ - ETV Bharat kannada News
ಚಿಕ್ಕೋಡಿ (ಬೆಳಗಾವಿ ):ರಾಜ್ಯಕ್ಕೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಿದ್ದು, 26 ರಂದು ಸಾಯಂಕಾಲ ಕೋರ್ ಕಮಿಟಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಬಳಿಕ 8-10 ದಿನ ಚರ್ಚೆ ಮುಂದುವರಿದು ಟಿಕೆಟ್ ಫೈನಲ್ ಆಗಲಿದೆ. ಈ ಪ್ರಕ್ರಿಯೆಗಿಂತಲೂ ಮೊದಲು ನಾನು ಟಿಕೆಟ್ ಕೇಳುವ ಕುರಿತು ಅಥಣಿ ಕ್ಷೇತ್ರ ಜನರ ಸಭೆ ಮಾಡುತ್ತೇನೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.
ಲಕ್ಷಣ್ ಸವದಿ ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ 95 ಕೋಟಿ ರೂಪಾಯಿ ವೆಚ್ಚದಲ್ಲಿ ಎಂಟು ಕೆರೆ ತುಂಬುವ ಕಾಮಗಾರಿಗೆ ಚಾಲನೆ ನೀಡಿ ಸಭೆಯಲ್ಲಿ ಸವದಿ ಮಾತನಾಡಿದರು. ಅಥಣಿ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಅಥವಾ ಬಿಡಬೇಕು ಎಂಬುವುದನ್ನು ಇದೇ ತಿಂಗಳ 27ರಂದು ತೀರ್ಮಾನ ಮಾಡಲಾಗುವುದು. ಟಿಕೆಟ್ ಕೆಳಬೇಕಾ ಅಥವಾ ಬೇಡವಾ ಎಂಬುದನ್ನು ಕೇಳಲು ಅಥಣಿ ತಾಲೂಕಿನ ಜನರ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ಅಥಣಿ ಕಾರ್ಯಕರ್ತರು, ಬೆಂಬಲಿಗರು, ರೈತರನ್ನು ಕರೆದು ಬೃಹತ್ ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಜನರು ಟಿಕೆಟ್ ಕೇಳು ಎಂದರೆ ನಾನು ವರಿಷ್ಠರ ಹತ್ತಿರ ಟಿಕೆಟ್ ಕೇಳುತ್ತೇನೆ. ಒಂದು ವೇಳೆ ಬೇಡಾ ಎಂದರೆ ನಾನು ಯಥಾಸ್ಥಿತಿ ಮುಂದುವರಿಯುತೇನೆ ಎಂದು ಸವದಿ ಹೇಳಿದರು.
ಇದನ್ನೂ ಓದಿ :ಸೀರೆ ಹಂಚಲು ಬಂದವರನ್ನು ತರಾಟೆಗೆ ತೆಗೆದುಕೊಂಡ ಮಹಿಳೆ: ವಿಡಿಯೋ ವೈರಲ್