ಕರ್ನಾಟಕ

karnataka

ಸಂಸತ್​ ಎದುರಿಗೆ ಪ್ರತಿಭಟಿಸಿದ ಮೆಹಬೂಬಾ ಮುಫ್ತಿ ಬಂಧನ

ETV Bharat / videos

ಸಂಸತ್​ ಎದುರಿಗೆ ಪ್ರತಿಭಟಿಸಿದ ಮೆಹಬೂಬಾ ಮುಫ್ತಿ ಪೊಲೀಸರ ವಶಕ್ಕೆ: ವಿಡಿಯೋ - Mehbooba mufti protest in Delhi

By

Published : Feb 8, 2023, 2:15 PM IST

Updated : Feb 14, 2023, 11:34 AM IST

ನವದೆಹಲಿ:ಬಜೆಟ್​ ಅಧಿವೇಶನ ರಂಗೇರಿದ್ದು, ಲೋಕಸಭೆ ಮತ್ತು ರಾಜ್ಯಸಭೆಯೊಳಗೆ ಗೌತಮ್​ ಅದಾನಿ ವಿಷಯವಾಗಿ ಚರ್ಚೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದರೆ, ಇತ್ತ ಸಂಸತ್​ ಹೊರಭಾಗದಲ್ಲಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪ್ರತಿಭಟನೆ ನಡೆಸಿದರು. ಜಮ್ಮು ಕಾಶ್ಮೀರದಲ್ಲಿ ಗೂಂಡಾ ಸರ್ಕಾರವಿದೆ. ಸರ್ಕಾರ ಅತಿಕ್ರಮಿಸಿಕೊಂಡಿದೆ. ಅಫ್ಘಾನಿಸ್ತಾನದಂತೆ ಕಾಶ್ಮೀರವನ್ನು ನಾಶ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು. ಅನುಮತಿ ರಹಿತವಾಗಿ ವಿಜಯ್​ ಚೌಕ್​ ಬಳಿ ಧರಣಿ ನಡೆಸಲು ಮುಂದಾದ ಮೆಹಬೂಬಾ ಮುಫ್ತಿ ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಓದಿ:ಪ್ರಧಾನಿ ವಿರುದ್ಧ ಗಂಭೀರ ಆರೋಪ: ರಾಹುಲ್​ ಗಾಂಧಿಗೆ ಬಿಜೆಪಿಯಿಂದ ಹಕ್ಕುಚ್ಯುತಿ ನೋಟಿಸ್

Last Updated : Feb 14, 2023, 11:34 AM IST

ABOUT THE AUTHOR

...view details