ಕರ್ನಾಟಕ

karnataka

ಜಮೀನಿಗೆ ಅಳವಡಿಸಿದ ಐಬೆಕ್ಸ್​ ತಂತಿ ವಶಕ್ಕೆ ಪಡೆದ ಆರೋಪ : ಬುಡಕಟ್ಟು ಅರಣ್ಯವಾಸಿಗಳ ಗೋಳು ಕೇಳೋರ್ಯಾರು?

ETV Bharat / videos

ಜಮೀನಿಗೆ ಅಳವಡಿಸಿದ ಐಬೆಕ್ಸ್​ ತಂತಿ ವಶಕ್ಕೆ ಪಡೆದ ಆರೋಪ: ಬುಡಕಟ್ಟು ಅರಣ್ಯವಾಸಿಗಳ ಗೋಳು - forest officers seized ibex fence in karwar

By

Published : Aug 17, 2023, 4:36 PM IST

ಕಾರವಾರ (ಉತ್ತರ ಕನ್ನಡ): ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಜೋಯಿಡಾ ತಾಲೂಕಿನ ಕಾಡಪೋಡ ಗ್ರಾಮದ ರೈತರು ಐಬೆಕ್ಸ್​ ತಂತಿ ಅಳವಡಿಸಿದ್ದರು. ಈ ತಂತಿಗಳಿಂದ ಕಾಡುಪ್ರಾಣಿಗಳಿಗೆ ತೊಂದರೆ ಆಗುತ್ತಿದೆ ಎಂದು ತಂತಿಯನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಾಳಿ ನದಿಯ ದಡದಲ್ಲಿರುವ ಜೋಯಿಡಾ ತಾಲೂಕಿನಲ್ಲಿ ಒಂದೆಡೆ ಕಾಳಿ ಹುಲಿ ಸಂರಕ್ಷಿತ ಪ್ರದೇಶವಾದರೆ, ಇನ್ನೊಂದೆಡೆ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಹಲವು ವರ್ಷಗಳಿಂದ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಾ ಬಂದಿವೆ. ಇಲ್ಲಿನ ಜನರು ತಮ್ಮ ಮನೆಯ ಸುತ್ತಮುತ್ತಲಿರುವ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳಿಂದ ಕಾಪಾಡಲು ಐಬೆಕ್ಸ್​ ತಂತಿಗಳನ್ನು ಅಳವಡಿಸಿದ್ದರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಪ್ರಾಣಿಗಳಿಗೆ ತೊಂದರೆ ಆಗುತ್ತಿದೆ ಎಂದು ತಂತಿಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಅಳಲು ತೋಡಿಕೊಂಡಿರುವ ಗ್ರಾಮಸ್ಥರಾದ ದಿನೇಶ್​, ಕಾಡುಪ್ರಾಣಿಗಳ ಹಾವಳಿ ತಪ್ಪಿಸಿಕೊಳ್ಳಲು ಜಮೀನಿಗೆ ಐಬ್ಯಾಕ್ಸ್ ತಂತಿಗಳನ್ನು ಅಳವಡಿಸುವುದು ಅನಿವಾರ್ಯ. ಇದರಿಂದ ನಾವು ಬೆಳೆದ ಬೆಳೆಯನ್ನು ಕಾಡು ಪ್ರಾಣಿಗಳಿಂದ ರಕ್ಷಿಸಬಹುದು. ಆದರೆ ಅಧಿಕಾರಿಗಳು ಐಬಾಕ್ಸ್​ ತಂತಿಗಳನ್ನು ತೆಗೆದುಕೊಂಡು ಹೋಗಿರುವುದು ತುಂಬಾ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.

ಅರಣ್ಯ ಮಧ್ಯದಲ್ಲಿ ನಮ್ಮ ಮನೆಗಳಿದ್ದು ಕಾಡುಪ್ರಾಣಿಗಳು ಜಮೀನಿಗೆ ನುಗ್ಗುವುದು ಸಾಮಾನ್ಯವಾಗಿದೆ. ಇದನ್ನು ತಡೆಯಲು ನಾವು ಐಬ್ಯಾಕ್ಸ್ ತಂತಿ ಹಾಕುತ್ತೇವೆ. ಆದರೆ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ನಾವು ಅಳವಡಿಸಿದ್ದ ತಂತಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಗ್ರಾಮಕ್ಕೆ ಸಾಗುವ ಮಧ್ಯದಲ್ಲಿ ಹಳ್ಳ ಹರಿಯುತ್ತಿದ್ದು, ಕಾಲುಸಂಕ ನಿರ್ಮಾಣ ಮಾಡಲು ಅಧಿಕಾರಿಗಳು ಬಿಡುತ್ತಿಲ್ಲ ಎಂದು ಗ್ರಾಮಸ್ಥ ಮಂಜುನಾಥ ಆರೋಪಿಸಿದ್ದಾರೆ. 

ಇದನ್ನೂ ಓದಿ :ರೈತ ಸಹಾಯವಾಣಿ ಕೇಂದ್ರದ ಉದ್ಘಾಟನೆ: ಬೆಳೆ ದರ್ಶಕ್ ಆ್ಯಪ್​​ ಮೂಲಕ ಬೆಳೆ ಸಮೀಕ್ಷೆ ಸಮಸ್ಯೆ ಇತ್ಯರ್ಥ

ABOUT THE AUTHOR

...view details