ಕರ್ನಾಟಕ

karnataka

ETV Bharat / videos

ತಿಳಿಯದ ಭಾಷೆ.. ಚಾಲಕ ಹಿಂದೆ ಕೂರಿಸಿ ತಾನೇ​ ರಿಕ್ಷಾ ತುಳಿದ ವಿದೇಶಿ ಪ್ರವಾಸಿ - ಈಟಿವಿ ಭಾರತ ಕನ್ನಡ ನ್ಯೂಸ್​​

By

Published : Oct 13, 2022, 6:27 PM IST

Updated : Feb 3, 2023, 8:29 PM IST

ಜಲಂಧರ್​ (ಪಂಜಾಬ್​): ಕಳೆದ ರಾತ್ರಿ ಜಲಂಧರ್‌ನ ರಣಕ್ ಬಜಾರ್ ಪ್ರದೇಶದಲ್ಲಿ ವಿದೇಶಿ ವ್ಯಕ್ತಿಯೊಬ್ಬರು ಸೈಕಲ್​ ರಿಕ್ಷಾ ಓಡಿಸುತ್ತಿರುವ ದೃಶ್ಯ ಎಲ್ಲೆಡೆ ವೈರಲ್​ ಆಗಿದೆ. ವಿದೇಶಿ ವ್ಯಕ್ತಿ ಸೈಕಲ್​ ರಿಕ್ಷಾ ಓಡಿಸುವಾಗ ರಿಕ್ಷಾ ಚಾಲಕನು ಹಿಂದಿನ ಸೀಟಿನಲ್ಲಿ ಕುಳಿತಿದ್ದಾನೆ. ಈತನ ಜೊತೆಗೆ ಹಿಂದೆ ಕುಳಿತಿದ್ದ ವಿದೇಶಿಗನ ಪತ್ನಿ ವಿಡಿಯೋ ಮಾಡುತ್ತಿದ್ದರು. ಇನ್ನು ಈ ಬಗ್ಗೆ ಮಾತನಾಡಿರುವ ರಿಕ್ಷಾವಾಲ ರತನ್​ ಲಾಲ್​, ನಿನ್ನೆ ರಾತ್ರಿ ರಣಕ್ ಬಜಾರ್‌ನಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದಾಗ, ವಿದೇಶಿ ಗಂಡ ಮತ್ತು ಹೆಂಡತಿ ನನ್ನ ಬಳಿಗೆ ಬಂದು ಒಂದೆಡೆ ತೆರಳಲು ಹೇಳಿದರು. ನನಗೆ ಇಂಗ್ಲಿಷ್​​ ಬಾರದ ಹಿನ್ನೆಲೆ ನಾನು ತಡವರಿಸಿದೆ. ಈ ಸಂದರ್ಭ ವಿದೇಶಿಗರಿಗೆ ಪಂಜಾಬಿ ಬಾರದು. ಬಳಿಕ ವಿದೇಶಿ ವ್ಯಕ್ತಿ ಸ್ವತಃ ತಾನೇ ರಿಕ್ಷಾ ಚಲಾಯಿಸಿಕೊಂಡು ತೆರಳಿದ್ದಾನೆ. ವಿದೇಶಿಗನೇ ರಿಕ್ಷಾ ಚಲಾಯಿಸಿದರೂ ಬಳಿಕ ರತನ್​ ಲಾಲ್​ಗೆ ನೂರು ರೂಪಾಯಿಗಳನ್ನು ಕೊಟ್ಟು ಹೋಗಿದ್ದಾನೆ. ಈ ಘಟನೆಯನ್ನು ನಾನು ಎಂದಿಗೂ ಮರೆಯುವುದಿಲ್ಲ ರಿಕ್ಷಾವಾಲ ರತನ್​ಲಾಲ್​ ಹೇಳಿದ್ದಾನೆ.
Last Updated : Feb 3, 2023, 8:29 PM IST

ABOUT THE AUTHOR

...view details