ಅಂಜನಾದ್ರಿ ಹುಂಡಿಯಲ್ಲಿ ವಿದೇಶಿ ನಾಣ್ಯಗಳು: 28 ಲಕ್ಷ ರೂ. ಸಂಗ್ರಹ - anjanadri temple hundi counting
ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾದ ಚಿಕ್ಕರಾಂಪುರ ಗ್ರಾಮ ಸಮೀಪವಿರುವ ಅಂಜನಾದ್ರಿ ದೇಗುಲದ ಹುಂಡಿ ಹಣ ಎಣಿಕೆ ಕಾರ್ಯವನ್ನು ಗುರುವಾರ ತಹಶೀಲ್ದಾರ್ ಹಾಗೂ ದೇಗುಲದ ಆಡಳಿತ ಮಂಡಳಿ ಕಾರ್ಯದರ್ಶಿ ಮಂಜುನಾಥ ಭೋಗಾವತಿ ನೇತೃತ್ವದಲ್ಲಿ ನಡೆಸಲಾಯಿತು. ಕಳೆದ 55 ದಿನಗಳಲ್ಲಿ 28.79 ಲಕ್ಷ ಹಣ ಸಂಗ್ರಹವಾಗಿದ್ದು, ಬ್ರೆಜಿಲ್, ನೇಪಾಳ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸಿಂಗಾಪುರದ ನಾಣ್ಯಗಳು ಸಿಕ್ಕಿವೆ.
ಇದನ್ನೂ ಓದಿ :ಕಾಣಿಕೆ ಹುಂಡಿಗೆ ₹2 ಸಾವಿರದ ನೋಟು ಹಾಕದಂತೆ ಶಿರಡಿ ಸಾಯಿಬಾಬಾ ಭಕ್ತರಿಗೆ ಮನವಿ
ದೇಗುಲದ ಆದಾಯ ಕುಸಿತ: ಈ ಹುಂಡಿ ಎಣಿಕೆ ಕಾರ್ಯವು ಸಂಪೂರ್ಣ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಿತು. ಕಳೆದ ಆರು ತಿಂಗಳಿಂದ ಅಂಜನಾದ್ರಿ ದೇಗುಲದ ಆದಾಯ ನಿಧಾನವಾಗಿ ಕುಸಿಯುತ್ತಿರುವುದು ಬೆಳಕಿಗೆ ಬಂದಿದೆ. ಚುನಾವಣಾ ಪೂರ್ವ ಅಂದರೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಮಾರ್ಚ್ 29 ರಂದು ಕಾಣಿಕೆ ಪೆಟ್ಟಿಗೆ ಎಣಿಕೆ ಕಾರ್ಯ ನಡೆಸಲಾಗಿತ್ತು. ಆ ವೇಳೆ 10.64 ಲಕ್ಷ ರೂಪಾಯಿ ಸಂಗ್ರಹವಾಗಿತ್ತು.
ಇದನ್ನೂ ಓದಿ : ಮಲೆಮಹದೇಶ್ವರ ದೇಗುಲದ ಹುಂಡಿ ಎಣಿಕೆ: 22 ದಿನಕ್ಕೆ 1.82 ಕೋಟಿ ರೂಪಾಯಿ ಸಂಗ್ರಹ