86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ: ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಿದ ಸಾವಿರಾರು ಜನ - Flower Show in 86th kannda sahitya samelana
ಹಾವೇರಿ: ಹಾವೇರಿಯಲ್ಲಿ ನಡೆಯುತ್ತಿರುವ 86 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಜನ ಸಾಗರವೇ ಹರಿದು ಬರುತ್ತಿದೆ. ಈ ವೇಳೆ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾಡಳಿತ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಲಕ್ಷಾಂತರ ಜನರು ಭೇಟಿ ನೀಡುತ್ತಿದ್ದಾರೆ. ಏಲಕ್ಕಿಯಲ್ಲಿ ಮಾಡಿದ ಗಣಪ, ಪುಷ್ಪದಲ್ಲಿ ಅರಳಿರುವ ತರಕಾರಿ ಮಾರುವ ಮಹಿಳೆ, ಪುಷ್ಪಗಳಲ್ಲಿ ಮೈತಳೆದ ಈಶ್ವರ ಲಿಂಗು, ಡಾಲ್ಫಿನ್ ಮತ್ತು ಆನೆ ಕಲಾಕೃತಿಗಳು ಪ್ರೇಕ್ಷಕರನ್ನ ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ. ವಿವಿಧ ತರಕಾರಿ ಮತ್ತು ಹಣ್ಣುಗಳಲ್ಲಿ ಮೂಡಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು ಗಮನ ಸೆಳೆಯುತ್ತಿವೆ. ತೋಟಗಾರಿಕೆ ಇಲಾಖೆ ಸುಮಾರು 1 ಲಕ್ಷ 50 ಸಾವಿರ ಪುಷ್ಪಗಳಿಂದ ವಿವಿಧ ಕಲಾಕೃತಿಗಳನ್ನು ನಿರ್ಮಿಸಿದೆ.
Last Updated : Feb 3, 2023, 8:38 PM IST