ದೇವರ ತಲೆಯಿಂದ ಬಲಬದಿಗೆ ಬಿದ್ದ ಪ್ರಸಾದ.. ಕುಮಾರಸ್ವಾಮಿಗೆ ಅದೃಷ್ಟ ಎನ್ನುತ್ತಿದ್ದಾರೆ ಜೆಡಿಎಸ್ ಕಾರ್ಯಕರ್ತರು - ಭಟ್ಕಳ ತಾಲೂಕಿನ ಸಾರದಹೊಳೆ ಹನುಮಂತ ದೇವಸ್ಥಾನ
ಕಾರವಾರ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪಂಚರತ್ನ ರಥಯಾತ್ರೆಯ ವೇಳೆ ಭಟ್ಕಳ ತಾಲೂಕಿನ ಸಾರದಹೊಳೆ ಹನುಮಂತ ದೇವಸ್ಥಾನದಲ್ಲಿ ದೇವರ ತಲೆಯ ಮೇಲಿನಿಂದ ಹೂವಿನ ಪ್ರಸಾದ ಬಿದ್ದಿದೆ. ಹನುಮಂತ ದೇವರಿಗೆ ಅರ್ಚಕರು ಪೂಜೆ ಸಲ್ಲಿಸುವಾಗ ದೇವರ ಮೇಲಿದ್ದ ಅಡಿಕೆ ಹಿಂಗಾರ ಬಲ ಬದಿಗೆ ಬಿದ್ದಿದೆ. ಎರಡು ದಿನಗಳ ಉತ್ತರ ಕನ್ನಡ ಜಿಲ್ಲೆಯ ಯಾತ್ರೆಯಲ್ಲಿ ಗೋಕರ್ಣದ ಮಹಾಗಣಪತಿ, ಹೊನ್ನಾವರ ಚಂದಾವರದ ಆಂಜನೇಯ ದೇವಸ್ಥಾನ ಹಾಗೂ ಭಟ್ಕಳದ ಸಾರದಹೊಳೆ ಹನುಮಂತ ದೇವಾಲಯದಲ್ಲಿ ಪ್ರಸಾದವಾಗಿದೆ. ಇದು ಕುಮಾರಸ್ವಾಮಿ ಪಂಚರತ್ನ ಯಾತ್ರೆಗೆ ಶುಭ ಸಂಕೇತ ಎಂದು ಜೆಡಿಎಸ್‌ನ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ; ಮೊದಲ ದಿನವೇ ಕಲಾಪಕ್ಕೆ ಗೈರಾದ ಪ್ರತಿಪಕ್ಷ ನಾಯಕ