Flood: ಹೈದರಾಬಾದ್-ವಿಜಯವಾಡ ಹೆದ್ದಾರಿಯಲ್ಲಿ ಮುಂದುವರೆದ ಪ್ರವಾಹ: ವಾಹನ ಸಂಚಾರ ಸ್ಥಗಿತ
ಹೈದರಾಬಾದ್ : ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ಹೈದರಾಬಾದ್-ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ. ಕೃಷ್ಣಾ ಜಿಲ್ಲೆಯ ಕೀಸರ ಟೋಲ್‌ಗೇಟ್ ಬಳಿಯ ಐತಾವರಂನಲ್ಲಿ ಮುನ್ನೇರು ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಸಂಜೆಯಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇಂದು ಬೆಳಗ್ಗೆ ಕೂಡ ನೀರು ಯಥಾಸ್ಥಿತಿಯಲ್ಲಿದ್ದು, ಕೀಸರ ಟೋಲ್‌ಗೇಟ್‌ನಿಂದ ವಿಜಯವಾಡ ಕಡೆಗೆ ಸುಮಾರು 2 ಕಿ.ಮೀ ವರೆಗೆ ವಾಹನಗಳು ನಿಂತಿವೆ.
ಇದನ್ನೂ ಓದಿ :Karnataka Rains : ರಾಜ್ಯಾದ್ಯಂತ ಮುಂಗಾರು ಮಳೆ ಹನಿಗಳ ಲೀಲೆ! PHOTOಗಳಲ್ಲಿ ನೋಡಿ..
ಮುನ್ನೇರು, ಕೃಷ್ಣಾ ನದಿಯ ಉಪನದಿಯಾಗಿದೆ. ಇಲ್ಲಿ ಪ್ರವಾಹ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಹಲವು ಇತರೆ ಮಾರ್ಗಗಳ ಮೂಲಕ ಕಳುಹಿಸಲಾಗುತ್ತಿದೆ. ಗುರುವಾರ ಸಂಜೆಯಿಂದಲೇ ಐತಾವರಂ ಗ್ರಾಮದಲ್ಲಿ ಬಸ್‌ಗಳು ಸೇರಿದಂತೆ ಇತರೆ ದೊಡ್ಡ ವಾಹನಗಳು ನಿಂತಿದ್ದವು. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
ಇದನ್ನೂ ಓದಿ :Mullayyanagiri : ಭಾರಿ ಮಳೆ, ಅಲ್ಲಲ್ಲಿ ಭೂಕುಸಿತ ; ಮುಳ್ಳಯ್ಯನಗಿರಿ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ