ಕರ್ನಾಟಕ

karnataka

ಪಣಂಬೂರು ಬೀಚ್​ನಲ್ಲಿ ಪ್ಲೋಟಿಂಗ್ ಬ್ರಿಡ್ಜ್‌ ಪ್ರಾರಂಭ

ETV Bharat / videos

ಪಣಂಬೂರು ಬೀಚ್​ನಲ್ಲಿ ಫ್ಲೋಟಿಂಗ್ ಬ್ರಿಡ್ಜ್‌ ಆರಂಭ: ಪ್ರವಾಸಿಗರು ಫುಲ್​ ಖುಷ್​ - ಫ್ಲೋಟಿಂಗ್ ಬ್ರಿಡ್ಜ್‌

By ETV Bharat Karnataka Team

Published : Dec 28, 2023, 12:57 PM IST

ಮಂಗಳೂರು :ಜಿಲ್ಲಾ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ ಮೂಡಿದೆ. ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಫ್ಲೋಟಿಂಗ್ ಬ್ರಿಡ್ಜ್ ಆರಂಭವಾಗಿದೆ. ಇದರಿಂದಾಗಿ ಪ್ರವಾಸಿಗರು ಸಂತಸಗೊಂಡಿದ್ದಾರೆ. 

ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಫ್ಲೋಟಿಂಗ್ ಬ್ರಿಡ್ಜ್ ಮಂಗಳೂರು ಬೀಚ್‌ನಲ್ಲಿ ಇರಲಿಲ್ಲ. ಹೀಗಾಗಿ, ಈ ಕೊರತೆ ನೀಗಿಸಲು ಪಣಂಬೂರು ಬೀಚ್‌ನಲ್ಲಿ ತೇಲುವ ಸೇತುವೆ ಆರಂಭಿಸಲಾಗಿದೆ. ಕದಲಿ ಬೀಚ್ ಟೂರಿಸಂ ಸಂಸ್ಥೆಯಿಂದ ಈ ಫ್ಲೋಟಿಂಗ್ ಬ್ರಿಡ್ಜ್ ನಿರ್ಮಾಣ ಮಾಡಲಾಗಿದ್ದು, ಸದ್ಯಕ್ಕೆ ಪ್ರವಾಸಿಗರಿಗೆ ಮುಕ್ತವಾಗಿದೆ. ತೇಲುವ ಸೇತುವೆಯಲ್ಲಿ ನಡೆದಾಡುತ್ತಾ ಪ್ರವಾಸಿಗರು ಖುಷಿಗೊಂಡಿದ್ದಾರೆ.

ಈ ಸೇತುವೆಯು 125 ಮೀಟರ್ ಉದ್ದವಿದೆ. ಅಲೆಗಳ ಅಬ್ಬರಕ್ಕೆ ಉಬ್ಬುತ್ತಾ ತಗ್ಗುತ್ತಾ ಇರೋ ಬ್ರಿಡ್ಜ್ ಮೇಲೆ ಪ್ರವಾಸಿಗರು ಬ್ಯಾಲೆನ್ಸ್ ಮಾಡುತ್ತಾ ಕುಣಿದಾಡುತ್ತಾರೆ. ಸೆಲ್ಫಿ ಫೋಟೋ ಕ್ಲಿಕ್ಕಿಸುತ್ತ ಎಂಜಾಯ್​ ಮಾಡುತ್ತಿದ್ದಾರೆ. ಇದಕ್ಕಾಗಿ 10-15 ಮಂದಿ ಲೈಫ್ ಗಾರ್ಡ್‌ಗಳನ್ನು ನೇಮಿಸಲಾಗಿದೆ. 

ಮೊದಲು ಪಣಂಬೂರು ಕಡಲ ಕಿನಾರೆಗೆ ಸಂಜೆ 6 ಗಂಟೆಗೆ ಬೀಗ ಹಾಕಲಾಗುತ್ತಿತ್ತು. ಈಗ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾತ್ರಿ 9 ಗಂಟೆಯವರೆಗೂ ಬೀಚ್ ತೆರೆದಿರುತ್ತದೆ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಸ್ಕೂಬಾ ಡೈವಿಂಗ್ ಮತ್ತು ಹೆಚ್ಚಿನ ಪ್ರವಾಸಿಗರ ಬೇಡಿಕೆಗನುಸಾರವಾಗಿ ಫುಡ್ ಕೋರ್ಟ್, ಪ್ರವಾಸಿಗರಿಗೆ ಉಳಿದುಕೊಳ್ಳಲು ಲಾಡ್ಜಿಂಗ್​ ಮಾದರಿಯಲ್ಲಿ ತಾತ್ಕಾಲಿಕ ನೆಲೆಯ ಕೋಣೆಗಳನ್ನು ನಿರ್ಮಿಸುವ ಚಿಂತನೆ ಜಿಲ್ಲಾಡಳಿತಕ್ಕಿದೆ. 

ಇದನ್ನೂ ಓದಿ :₹66 ಕೋಟಿ ವೆಚ್ಚದ ಬ್ರಿಡ್ಜ್‌ ಕಾಮಗಾರಿ ಮುಗಿಯೋದ್ಯಾವಾಗ?.. ಮೂಲಸೌಕರ್ಯಗಳಿಲ್ಲದೆ ನಲುಗಿದ ಧರಂಸಿಂಗ್‌ ತವರೂರು..

ABOUT THE AUTHOR

...view details