ಕರ್ನಾಟಕ

karnataka

ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ಬಿಜೆಪಿಯಿಂದ ಪಲ್ಟಿ ಚಳುವಳಿ: ವಿಡಿಯೋ

ETV Bharat / videos

ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ಬಿಜೆಪಿಯಿಂದ ಪಲ್ಟಿ ಚಳವಳಿ: ವಿಡಿಯೋ - etv bharat karnataka

By ETV Bharat Karnataka Team

Published : Oct 28, 2023, 10:18 AM IST

ಮಂಡ್ಯ:ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರದ ಧೋರಣೆಯಿಂದ ರೈತರು ಪಲ್ಟಿ ಹೊಡೆಯುವಂತಾಗಿದೆ ಎಂದು  ಬಿಜೆಪಿ ಕಾರ್ಯಕರ್ತರು ವಿನೂತನವಾಗಿ ಪಲ್ಟಿ ಚಳವಳಿ ನಡೆಸಿದರು.

ಬಿಜೆಪಿ ಕಾರ್ಯಕರ್ತ ಶಿವಕುಮಾರ ಆರಾಧ್ಯ ಮಾತನಾಡಿ, "ಕಾವೇರಿ ನೀರಿಗಾಗಿ ನಡೆಸುತ್ತಿರುವ ಹೋರಾಟ 53ನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಕೂಡ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಹೀಗಾಗಿ ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಪಲ್ಟಿ ಚಳವಳಿ ಮಾಡಿದ್ದೇವೆ. ಅಧಿಕಾರಕ್ಕೆ ಕಾಂಗ್ರೆಸ್​ ಸರ್ಕಾರ ಬಂದಾಗಲೆಲ್ಲಾ ರೈತರನ್ನು ಪಲ್ಟಿ ಹೊಡೆಸಿಕೊಳ್ಳುತ್ತಾ ಬರುತ್ತಿದೆ. ಕೆಆರ್‌ಎಸ್ ಅಣೆಕಟ್ಟಿಯಲ್ಲಿ ನೀರೆಷ್ಟಿದೆ?. ರೈತರು ಎಷ್ಟು ಎಕರೆಯಲ್ಲಿ ನಾಟಿ ಮಾಡಿದ್ದಾರೆ?. ಮತ್ತೆ ಜನ- ಜಾನುವಾರುಗಳಿಗೆ ನೀರೆಷ್ಟು ಬೇಕು?. ಮೈಸೂರು - ಬೆಂಗಳೂರು ಜನರಿಗೆ ನೀರೆಷ್ಟು ಬೇಕೆಂಬ ಅಂಕಿ- ಅಂಶವನ್ನು ಮಾಧ್ಯಮಗಳ ಮೂಲಕ ಪ್ರಕಟಿಸಿ, ಮುಖ್ಯಮಂತ್ರಿಗಳಿಗೆ ವಾಸ್ತವಿಕ ಸ್ಥಿತಿಯ ಬಗ್ಗೆ ತಿಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ" ಎಂದರು.

"ರೈತ ದೇಶದ ಬೇನ್ನೆಲುಬು, ರೈತರ ಮೇಲೆ ಕರುಣೆ ಇದ್ದರೆ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಸೇರಿ ಒಂದು ದಿನ ಕಾವೇರಿ ಹೋರಾಟಕ್ಕೆ ಧುಮುಕಬೇಕು" ಎಂದು ಮನವಿ ಮಾಡಿದರು. ಈ ವೇಳೆ ಬಿಜೆಪಿಯ ಸಾತನೂರು ಯೋಗೇಶ್, ಹೊಸಹಳ್ಳಿ ಶಿವು, ಆನಂದ, ಕಿರಣ್ ಇತರರಿದ್ದರು.

ಇದನ್ನೂ ಓದಿ:ಮಂಡ್ಯದಲ್ಲಿ ಕಾವೇರಿ ಹೋರಾಟ: ಕಪ್ಪು ಬಾವುಟ ಪ್ರದರ್ಶಿಸಿ ಕರಾಳ ದಿನಾಚರಣೆ

ABOUT THE AUTHOR

...view details