ಒಂದೇ ವಾರದಲ್ಲಿ ಧಾರವಾಡದ ವಿವಿಧೆಡೆ ಐದು ರಸಲ್ ವೈಪರ್ ಹಾವುಗಳ ರಕ್ಷಣೆ - ಈಟಿವಿ ಭಾರತ್ ಕನ್ನಡ ನ್ಯೂಸ್
ಧಾರವಾಡ :ಎಲ್ಲೆಡೆ ಮಳೆಗಾಲ ಶುರುವಾಗಿರುವುದರಿಂದ ಜನವಸತಿ ಪ್ರದೇಶಗಳಲ್ಲಿ ಹಾವುಗಳು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಧಾರವಾಡ ನಗರದ ವಿವಿಧೆಡೆ ಒಂದೇ ವಾರದಲ್ಲಿ 5 ರಸಲ್ ವೈಪರ್ ಹಾವು (ಕೊಳಕು ಮಂಡಲ)ಗಳನ್ನು ಉರಗ ಪ್ರೇಮಿ ಯಲ್ಲಪ್ಪ ಜೋಡಳ್ಳಿ ರಕ್ಷಣೆ ಮಾಡಿದ್ದಾರೆ. ಹೊಸಯಲ್ಲಾಪುರ, ಶೆಟ್ಟರ ಕಾಲೋನಿ, ಸಂಗೊಳ್ಳಿ ರಾಯಣ್ಣ ನಗರ ಹಾಗೂ ಶ್ರೀನಗರ ಸೇರಿದಂತೆ ಹಲವೆಡೆ ರಸಲ್ ವೈಪರ್ ಹಾವು ಕಾಣಿಸಿಕೊಂಡಿದ್ದವು.
ಇದರಿಂದ ಸ್ಥಳೀಯರು ಭಯಭೀತರಾಗಿದ್ದು, ಯಲ್ಲಪ್ಪ ಜೋಡಳ್ಳಿ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ತೆರಳಿದ ಯಲ್ಲಪ್ಪ ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಇತ್ತೀಚೆಗೆ ಧಾರವಾಡ ನಗರದಲ್ಲಿ ರಸಲ್ ವೈಪರ್ ಹಾವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇಂದು ಸಹ ಶೆಟ್ಟರ್ ಕಾಲೋನಿ ಮನೆಯೊಂದರ ಬೂಟಿನಲ್ಲಿ ರಸಲ್ ವೈಪರ್ ಹಾವು ಕಾಣಿಸಿಕೊಂಡಿತ್ತು. ಮನೆಯವರ ಕಣ್ಣಿಗೆ ಹಾವು ಕಂಡ ಕಾರಣ ಸದ್ಯ ಯಾವುದೇ ಅಪಾಯ ಕಂಡು ಬಂದಿಲ್ಲ. ಬಳಿಕ ಹಾವನ್ನು ಯಲ್ಲಪ್ಪ ರಕ್ಷಣೆ ಮಾಡಿ ಇದನ್ನು ಸಹಾ ಕಾಡಿಗೆ ಬಿಟ್ಟಿದ್ದಾರೆ.
ಇದನ್ನೂ ಓದಿ :ಅಡುಗೆ ಮನೆ ಹೊಕ್ಕಿದ್ದ ನಾಗರಹಾವು : ವಿಷಕಾರಿ ಸರ್ಪದಿಂದ ಮನೆಯವರನ್ನು ಕಾಪಾಡಿದ ಬೆಕ್ಕುಗಳು