ಏಕಾಏಕಿ ಹಿರೇಹಳ್ಳಕ್ಕೆ ನೀರು.. ಹಳ್ಳದ ಮಧ್ಯೆ ಸಿಲುಕಿಕೊಂಡ ಐದು ಜನ ರೈತರ ರಕ್ಷಣೆ - ಅಗ್ನಿ ಶಾಮಕ ದಳ ಸಿಬ್ಬಂದಿ
ಮುದ್ಲಾಪುರ ಬಳಿ ಇರುವ ಹಿರೇಹಳ್ಳ ಜಲಾಶಯದಿಂದ ಏಕಾಏಕಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಬಳಿ ಹಳ್ಳದ ಮಧ್ಯೆ ಸಿಲುಕಿದ್ದ ಐದು ಜನ ರೈತರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಹಳ್ಳದ ಇನ್ನೊಂದು ದಡದಲ್ಲಿದ್ದ ಕೃಷಿ ಪಂಪುಸೆಟ್ಟು ತೆಗೆದುಕೊಳ್ಳಲು ಹೋಗಿದ್ದ ಕೊಳೂರು ಗ್ರಾಮದ ರೈತರಾದ ಮಹಾಂತೇಶ ಡೊಳ್ಳಿನ, ರಮೇಶ ಡೊಳ್ಳಿನ, ಬಸವರಾಜ ಗೊಂದಿಹೊಸಳ್ಳಿ, ಬಸವರಾಜ ಹುಯಿಲಗೋಳ, ಕೆಂಚಪ್ಪ ಕುರಬರ ಸಿಲುಕಿಕೊಂಡಿದ್ದರು. ಹಳ್ಳದಲ್ಲಿ ಕಡಿಮೆ ನೀರು ಹರಿಯುತ್ತಿದ್ದಾಗ ಹಳ್ಳಕ್ಕೆ ಇಳಿದಿದ್ದರು. ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಹಿರೇಹಳ್ಳ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು ಏಕಾಏಕಿ ಹಿರೇಹಳ್ಳ ಜಲಾಶಯದಿಂದ ನೀರು ಬಿಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯ ಮಾಡಿದ್ದಾರೆ.
Last Updated : Feb 3, 2023, 8:27 PM IST