ಕರ್ನಾಟಕ

karnataka

ETV Bharat / videos

ಇಂದಿನಿಂದ ಅಮರನಾಥ ಯಾತ್ರೆಗೆ ಚಾಲನೆ.. ನಾನೂನ್ ಬೇಸ್ ಕ್ಯಾಂಪ್‌ನಿಂದ 2,750 ಯಾತ್ರಾರ್ಥಿಗಳ ಪ್ರಯಾಣ! - ಅಮರನಾಥ ಯಾತ್ರೆಗೆ ಮೊದಲ ಬ್ಯಾಚ್​

By

Published : Jun 30, 2022, 8:49 AM IST

Updated : Feb 3, 2023, 8:24 PM IST

ಎರಡು ವರ್ಷಗಳ ಸುದೀರ್ಘ ವಿರಾಮದ ಬಳಿಕ ಇಂದಿನಿಂದ ಅಮರನಾಥ ಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಜಿಲ್ಲಾ ಅಭಿವೃದ್ಧಿ ಆಯುಕ್ತ ಅನಂತನಾಗ್ ಡಾ.ಪಿಯೂಷ್ ಸಿಂಗ್ಲಾ ಅವರು ನಾನೂನ್ ಬೇಸ್ ಕ್ಯಾಂಪ್‌ನಿಂದ 2750 ಯಾತ್ರಾರ್ಥಿಗಳ ಮೊದಲ ಬ್ಯಾಚ್ ಅನ್ನು ಶ್ರೀ ಅಮರನಾಥ ದರ್ಶನಕ್ಕೆ ಕಳುಹಿಸಿದರು. ಬಾಬಾ ಬರ್ಫಾನಿಯ ದರ್ಶನಕ್ಕೆ ತೆರಳಲು ಯಾತ್ರಾರ್ಥಿಗಳು ಸಾಕಷ್ಟು ಉತ್ಸಾಹ ತೋರಿ, ಬಂಬ್ ಬೋಲೆ ಎಂಬ ಘೋಷಣೆಗಳನ್ನು ಕೂಗಿದರು. ಯಾತ್ರಾರ್ಥಿಗಳನ್ನು ನಾನೂನ್ ಒನ್ ಬೇಸ್ ಕ್ಯಾಂಪ್‌ನಿಂದ ಚಂದನ್​ವಾರಿಗೆ ವಾಹನಗಳಲ್ಲಿ ಸಾಗಿಸಲಾಯಿತು. ಅಲ್ಲಿಂದ ಅವರು ಪಾದಚಾರಿ ಮಾರ್ಗಗಳು, ಕುದುರೆಗಳು ಮತ್ತು ದಂಡಿ ಮೂಲಕ ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿರುವ ಘುಪ್ಪಾ ತಲುಪಿದರು. ಹಲವಾರು ಯಾತ್ರಿಕರು ಹೆಲಿಕಾಪ್ಟರ್ ಮೂಲಕ ಘಪ್ಪಾಗೆ ತೆರಳಿದರು.
Last Updated : Feb 3, 2023, 8:24 PM IST

ABOUT THE AUTHOR

...view details