ಜಿಗಣಿ ಪಟ್ಟಣದಲ್ಲಿ ಆಟೋ ಮೊಬೈಲ್ಸ್ ಆಯಿಲ್ ಅಂಗಡಿಗೆ ಬೆಂಕಿ: 22 ಲಕ್ಷ ರೂ. ಸರಕು ಸುಟ್ಟು ಭಸ್ಮ - ETV Bharat kannada News
ಆನೇಕಲ್ (ಬೆಂಗಳೂರು) : ಜಿಗಣಿ ಪಟ್ಟಣದ ಎಪಿಸಿ-ಪುರಸಭೆ ಮುಖ್ಯರಸ್ತೆಯಲ್ಲಿರುವ ಓಂಸಾಯಿ ಆಟೋ ಮೋಬೈಲ್ಸ್ ಆಯಿಲ್ ಅಂಗಡಿಗೆ ಇಂದು ದಿಢೀರ್ ಬೆಂಕಿ ಹೊತ್ತಿಕೊಂಡ ಪರಿಣಾಮ ಇಡೀ ಬಿಲ್ಡಿಂಗ್ ಬೆಂಕಿಯ ಹೊಗೆಯಲ್ಲಿ ಮುಳುಗಿದೆ. ಮಂಜು ಬಿಲ್ಡಿಂಗ್ನ ನೆಲ ಮಹಡಿಯ ಆಯಿಲ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿಗೆ ಅಂಗಡಿಯಲ್ಲಿ ಆಯಿಲ್ ಕ್ಯಾನ್ ಸ್ಫೋಟಗೊಂಡು ಇಡೀ ಅಂಗಡಿ ಅಗ್ನಿಗಾಹುತಿಯಾಗಿದೆ.
ಪಕ್ಕದಲ್ಲಿ ಕೆಟ್ಟು ನಿಂತ ದ್ವಿಚಕ್ರ ವಾಹನಗಳು, ಪ್ಲೆಕ್ಸ್ ಬೋರ್ಡ್ ಮತ್ತು ಟೈರ್ಗಳಿಗೆ ಬೆಂಕಿ ತಗುಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಬೆಂಕಿ ಅಂಗಡಿಯನ್ನು ಸುಟ್ಟು ಭಸ್ಮಗೊಳಿಸಿದೆ. ಘಟನೆಯಲ್ಲಿ ಅಂಗಡಿಗೆ ಬೆಂಕಿ ಬಿದ್ಧ ಪರಿಣಾಮ ಅಂಗಡಿ ಮಾಲೀಕರಾದ ಗೋಪಿ ಸರವಣ ಅವರ 22 ಲಕ್ಷಕ್ಕೂ ಅಧಿಕ ಸರಕು ನಾಶವಾಗಿದೆ. ಈ ವೇಳೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಮನೆ ಮೇಲಿನ ಮೂರು ಮಹಡಿಯ ಜನರು ಹೊರಗೆ ಬಂದಿದ್ದರಿಂದ ಯಾರಿಗೂ ಅಪಾಯವಾಗಿಲ್ಲ. ಬಳಿಕ ತತ್ಕ್ಷಣ ಆನೇಕಲ್ನ ಮೂರು ಅಗ್ನಿಶಾಮಕದಳ ಮತ್ತು ಜಿಗಣಿ ಪೊಲೀಸರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ :ಕಾರವಾರ: ಹತ್ತಾರು ಎಕರೆ ಅರಣ್ಯ ಅಗ್ನಿಗಾಹುತಿ