Vande Bharat Train: ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ; ಪ್ರಯಾಣಿಕರು ಸುರಕ್ಷಿತ
ಮಧ್ಯಪ್ರದೇಶ: ಭೋಪಾಲ್‌ನಿಂದ ದೆಹಲಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂದು ಬೆಳಗ್ಗೆ ಭೋಪಾಲ್‌ನ ಕುರ್ವೈ ಕೆಥೋರಾ ನಿಲ್ದಾಣದಿಂದ ದೆಹಲಿಯ ನಿಜಾಮುದ್ದೀನ್‌ಗೆ ಹೊರಟಿದ್ದ ರೈಲಿನ ಸಿ-14ನೇ ಬೋಗಿಯ ಬ್ಯಾಟರಿ ಬಾಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಘಟನೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನೆ ಗೊತ್ತಾಗುತ್ತಿದ್ದಂತೆ ತಕ್ಷಣ ರೈಲು ನಿಲ್ಲಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿವೆ.
ಪ್ರಯಾಣಿಕರು ನೀಡಿದ ಮಾಹಿತಿ ಪ್ರಕಾರ, ಬೆಳಗ್ಗೆ 5.40ಕ್ಕೆ ಭೋಪಾಲ್‌ನ ರಾಣಿ ಕಮಲಾಪತಿಯಿಂದ ದೆಹಲಿಯ ನಿಜಾಮುದ್ದೀನ್‌ಗೆ ಹೊರಟಿದ್ದ ರೈಲು ಸಂಖ್ಯೆ 20171 (ವಂದೇ ಭಾರತ್ ರೈಲು) ಬಿನಾ ಬಳಿಯ ಕುರ್ವೈ ಕೆಥೋರಾ ತಲುಪಿದಾಗ ಸಿ-14 ಕೋಚ್‌ನಿಂದ ಹೊಗೆ ಹೊರಬರುತ್ತಿರುವುದು ಕಂಡು ಬಂದಿದೆ. ನೋಡನೋಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಉರಿಯಲು ಪ್ರಾರಂಭಿಸಿದೆ. ಸಿ-14 ಕೋಚ್‌ನಲ್ಲಿ ಸುಮಾರು 36 ಪ್ರಯಾಣಿಕರಿದ್ದರು. ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ಇದನ್ನೂ ಓದಿ :Vande Bharat Express: ದಾವಣಗೆರೆಯಲ್ಲಿ ವಂದೇ ಭಾರತ್ ರೈಲಿಗೆ ಕಲ್ಲೆಸೆದ ಕಿಡಿಗೇಡಿಗಳು: ಕಿಟಕಿಗೆ ಹಾನಿ