ಕರ್ನಾಟಕ

karnataka

ಪಚ್ಚನಾಡಿ ಡಂಪಿಂಗ್ ಯಾರ್ಡ್​ಗೆ ಮತ್ತೆ ಅಗ್ನಿ ಅವಘಡ

ETV Bharat / videos

ಪಚ್ಚನಾಡಿ ಡಂಪಿಂಗ್ ಯಾರ್ಡ್​ಗೆ ಮತ್ತೆ ಅಗ್ನಿ ಅವಘಡ - ಕಂಗಾಲಾದ ನಾಗರಿಕರು - ಈಟಿವಿ ಭಾರತ್ ಕನ್ನಡ ಸುದ್ದಿ

By

Published : Feb 5, 2023, 10:25 PM IST

Updated : Feb 6, 2023, 4:07 PM IST

ಮಂಗಳೂರು: ನಗರದ ಪಚ್ಚನಾಡಿ ಡಂಪಿಂಗ್ ಯಾರ್ಡ್​ನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಇತ್ತೀಚೆಗೆ ಕಾಣಿಸಿಕೊಂಡ ಬೆಂಕಿ ಒಂಬತ್ತು ದಿನಗಳ ಕಾಲ ನಿರಂತರ ಉರಿದಿತ್ತು. ಇದರ ಪರಿಣಾಮ ಹೊಗೆಯಿಂದ ಸುತ್ತಮುತ್ತಲಿನ ನಿವಾಸಿಗಳು ದಮ್ಮು, ಕೆಮ್ಮಿನಿಂದ ಬಳಲಿ ಈಗಷ್ಟೇ ಸಹಜ ಸ್ಥಿತಿಗೆ ಮರಳಿದ್ದರು. ಇದೀಗ ಮತ್ತೆ ತ್ಯಾಜ್ಯ ರಾಶಿಯಲ್ಲಿ ಬೆಂಕಿ ಕಾಣಿಸಿಕೊಂಡು ಆಕಾಶದೆತ್ತರಕ್ಕೆ ಹೊಗೆ ಏಳಲಾರಂಭಿಸಿದೆ. ಇದರಿಂದಾಗಿ ಸ್ಥಳೀಯ ನಾಗರಿಕರು ಮತ್ತೆ ಕಂಗಾಲಾಗಿದ್ದಾರೆ.

ಪದೇ ಪದೆ ಪಚ್ಚನಾಡಿ ಡಂಪಿಂಗ್ ಯಾರ್ಡ್​ನಲ್ಲಿ ಬೆಂಕಿ ಕಾಣಲಾರಂಭಿಸುತ್ತಿದ್ದು, ಇದೀಗ ಮತ್ತೆ ಇಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಜನವರಿ 6ರಂದು ಡಂಪಿಂಗ್ ಯಾರ್ಡ್​ಗೆ ಬಿದ್ದ ಬೆಂಕಿಯ ಹೊಗೆಗೆ ಪಚ್ಚನಾಡಿ, ಮಂಗಳನಗರ, ಮಂದಾರ ಪ್ರದೇಶದ ನಿವಾಸಿಗಳು ಸಂಕಷ್ಟಕ್ಕೊಳಗಾಗಿದ್ದರು. ನಿನ್ನೆ ಅದರ ಎದುರು ಭಾಗದ ತ್ಯಾಜ್ಯ ರಾಶಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿತ್ತು. ಇಂದು ಮತ್ತೆ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಯು ಸಂಪೂರ್ಣ ತ್ಯಾಜ್ಯ ರಾಶಿಯನ್ನು ಆವರಿಸಿದೆ. ಪರಿಣಾಮ ಹೊಗೆ ಆಕಾಶದೆತ್ತರಕ್ಕೆ ದಟ್ಟವಾಗಿ ಎದ್ದು, ಸಂಪೂರ್ಣ ಪರಿಸರವನ್ನು ವ್ಯಾಪಿಸುತ್ತಿದೆ. 

ಸ್ಥಳದಲ್ಲಿ 3-4 ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದ್ದು, ಸ್ಥಳದಲ್ಲಿ ಮಂಗಳೂರು ಮನಪಾ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.

ಇದನ್ನೂ ಓದಿ : ಆಕಸ್ಮಿಕ ಬೆಂಕಿಯಿಂದ ಸುಟ್ಟು ಕರಕಲಾದ ಜೋಳದ ತೆನೆ ರಾಶಿ.. ಮನಕಲಕುವಂತಿದೆ ರೈತನ ಆಕ್ರಂದನ

Last Updated : Feb 6, 2023, 4:07 PM IST

ABOUT THE AUTHOR

...view details