ಕರ್ನಾಟಕ

karnataka

14ಅಡಿ ಉದ್ದದ ಕಾಳಿಂಗಸರ್ಪ ಸೆರೆ

ETV Bharat / videos

14 ಅಡಿ ಉದ್ದದ ಕಾಳಿಂಗಸರ್ಪ ಸೆರೆ ಹಿಡಿದ ಅಗ್ನಿಶಾಮಕ ಸಿಬ್ಬಂದಿ; ವಿಡಿಯೋ.... - ಈಟಿವಿ ಭಾರತ ಕನ್ನಡ

By ETV Bharat Karnataka Team

Published : Dec 6, 2023, 11:00 AM IST

ತೆಂಕಶಿ:ತಮಿಳುನಾಡಿನ ತೆಂಕಶಿಯಲ್ಲಿ 14 ಅಡಿ ಉದ್ದದ ಅತ್ಯಂತ ವಿಷಕಾರಿ ಕಾಳಿಂಗಸರ್ಪವೊಂದು ಪತ್ತೆಯಾಗಿದೆ. ಇಲ್ಲಿಯ ಭಗವತಿಪುರಂ ಗ್ರಾಮದ ಜನವಸತಿ ಪ್ರದೇಶಕ್ಕೆ ನುಗ್ಗಿದ್ದ ಕಾಳಿಂಗಸರ್ಪವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಸೆರೆ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. 

ಕಾಫೀ ತೋಟದಲ್ಲಿ ಕಾಳಿಂಗ ಸರ್ಪ: ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಚಕ್ಕೋಡು ಗ್ರಾಮದಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿತ್ತು. ಜಗದೀಶ್ ಎಂಬುವವರ ಕಾಫಿ ತೋಟದಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾವನ್ನು ಕಂಡು ಬೆಚ್ಚಿಬಿದ್ದಿದ್ದರು. ಬಳಿಕ ಉರಗ ತಜ್ಞ ಹಾವನ್ನು ಸೆರೆ  ಹಿಡಿದು ಕಾಡಿಗೆ ಬಿಟ್ಟಿದ್ದರು. ಕಳಸ ತಾಲೂಕಿನಲ್ಲೂ ಕಾರ್ಗದ್ದೆ ಗ್ರಾಮದ ವೀರಪ್ಪಗೌಡ ಎಂಬುವರ ಅಡಕೆ ತೋಟದಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು.

ಮಂಗಳೂರಿನಲ್ಲಿ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದು, ನೆಲ್ಯಾಡಿ ಬಳಿ ಕಾಣಿಸಿಕೊಂಡಿತ್ತು. ಉರಗತಜ್ಞ ಝಕರಿಯಾ ಎನ್ನುವವರು ಹಾವನ್ನು ರಕ್ಷಣೆ ಮಾಡಿ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದರು. 

ಇದನ್ನೂ ಓದಿ:ಚಿಕಿತ್ಸೆಗಾಗಿ ಕಚ್ಚಿದ ನಾಗರಹಾವನ್ನೇ ಹಿಡಿದು ಆಸ್ಪತ್ರೆಗೆ ಬಂದ ಯುವಕ: ಸರ್ಪ ಕಂಡು ಬೆದರಿದ ವೈದ್ಯರು!

ABOUT THE AUTHOR

...view details