ಕರ್ನಾಟಕ

karnataka

ಬೋಟಾಡ್ ರೈಲು ನಿಲ್ದಾಣದಲ್ಲಿ ಬೆಂಕಿ ಅವಘಡ

ETV Bharat / videos

ಬೋಟಾಡ್ ರೈಲು ನಿಲ್ದಾಣದಲ್ಲಿ ಬೆಂಕಿ ಅವಘಡ.. ವಿಡಿಯೋ - ಅಹಮದಾಬಾದ್‌

By

Published : Apr 17, 2023, 6:13 PM IST

ಗಾಂಧಿನಗರ( ಗುಜರಾತ್): ಇಂದು ಮುಂಜಾನೆ ಇಲ್ಲಿನ ಬೊಟಾಡ್ ರೈಲು ನಿಲ್ದಾಣದಲ್ಲಿ ಸ್ಥಳೀಯ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರೈಲು ಇಂದು ಸಂಜೆ ಅಹಮದಾಬಾದ್‌ಗೆ ಹೊರಡಬೇಕಿತ್ತು. ಅದೃಷ್ಟವಶಾತ್​ ಪ್ರಯಾಣಿಕರಿಗೆ ಯಾವುದೇ ಪ್ರಾಣಹಾನಿ ಆಗಿಲ್ಲ ಎಂಬುದಾಗಿ ತಿಳಿದು ಬಂದಿದೆ.

ಇದೇ ರೀತಿ ಫೆಬ್ರವರಿ 19 ರಂದು ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿ ಡಬಲ್ ಡೆಕ್ಕರ್ ಗೂಡ್ಸ್ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿದ್ದವು. ಘಟನೆಯ ನಂತರ ಕೆಲವು ರೈಲಿನ ಭೋಗಿಗಳನ್ನು ಮರು ಹೊಂದಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿರುವ ಬಗ್ಗೆ ವರದಿಯಾಗಿರಲಿಲ್ಲ.

ಇದನ್ನೂ ಓದಿ:ದೂದ್‌ಸಾಗರ್ ವೀಕ್ಷಿಸಲು ತೆರಳಿದ ಯುವಕರ ಸಮಯಪ್ರಜ್ಞೆಯಿಂದ ತಪ್ಪಿತು ರೈಲು ಅಪಘಾತ

ಪ್ರಯಾಣಿಕರನ್ನು ಕಾಪಾಡಲು ಬಸ್​ ವ್ಯವಸ್ಥೆ:ರೈಲ್ವೆ ಭೋಗಿಗಳು ಹಳಿತಪ್ಪಿದ ಕಾರಣ ಹಲವಾರು ಪ್ರಯಾಣಿಕರು ಅಮ್ರೇಲಿ ಮತ್ತು ಬೊಟಾಡ್‌ನ ಲಿಲಿಯಾ ಮೋಟಾ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು. ಅಲ್ಲಿ ಡಬ್ಲ್ಯುಆರ್ ಅಧಿಕಾರಿಗಳು ಅವರನ್ನು ಭಾವನಗರ ಮತ್ತು ಸುರೇಂದ್ರನಗರದಂತಹ ಸ್ಥಳಗಳಿಗೆ ಸಾಗಿಸಲು ರಾಜ್ಯ ಸಾರಿಗೆ ಬಸ್‌ಗಳನ್ನು ವ್ಯವಸ್ಥೆ ಮಾಡಿದ್ದರು.

ಇದನ್ನೂ ಓದಿ:ಸ್ಟೇಷನ್​ನಲ್ಲಿ ನಿಂತಿದ್ದ ಪ್ಯಾಸೆಂಜರ್​ ರೈಲಿಗೆ ಬೆಂಕಿ: ಹೊತ್ತಿ ಉರಿದ ಬೋಗಿಗಳು

ABOUT THE AUTHOR

...view details