ಕರ್ನಾಟಕ

karnataka

ಬಿಹಾರದಲ್ಲಿ ಭೀಕರ ಅಗ್ನಿ ಅವಘಡ:50ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮ

ETV Bharat / videos

ಬಿಹಾರದಲ್ಲಿ ಅಗ್ನಿ ಅವಘಡ: 50ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಕರಕಲು

By

Published : Apr 11, 2023, 8:01 PM IST

ಗಯಾ (ಬಿಹಾರ):ಇಲ್ಲಿನ ಮಹಾಬೋಧಿ ದೇವಸ್ಥಾನದಿಂದ ಸುಮಾರು 500 ರಿಂದ 600 ಮೀಟರ್ ದೂರದಲ್ಲಿ ಇಂದು (ಮಂಗಳವಾರ) ಭೀಕರ ಅಗ್ನಿ ಅವಘಡ ಸಂಭವಿಸಿತು. ಬೋಧಗಯಾ ವರ್ಮಾ ತಿರುವಿನ ಬಳಿ ಇರುವ ತರಕಾರಿ ಮಾರುಕಟ್ಟೆಯಲ್ಲಿ ಇದ್ದಕ್ಕಿದ್ದಂತೆ ಅನಾಹುತ ನಡೆದಿದೆ. ಬೆಂಕಿ ಜ್ವಾಲೆಯಿಂದಾಗಿ ಹತ್ತಾರು ಅಂಗಡಿಗಳು ಬೆಂಕಿಗೆ ಆಹುತಿಯಾಗಿದ್ದು, ಗ್ಯಾಸ್ ಸಿಲಿಂಡರ್​ಗಳು ಸ್ಫೋಟಗೊಂಡಿವೆ ಎಂದು ತಿಳಿದುಬಂದಿದೆ.

ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಯಾರೋ ಅಲ್ಲಿ ಕಸ ಸುಡಲು ಯತ್ನಿಸಿದಾಗ ಬೆಂಕಿ ಹೊತ್ತಿಕೊಂಡಿತು ಎಂದು ಹೇಳಲಾಗುತ್ತಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹಲವು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿದರು. ಬೋಧಗಯಾ ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿದ್ದು, ಜನರು ಬೆಂಕಿಯ ಸಮೀಪ ಮತ್ತು ಆ ಪ್ರದೇಶಕ್ಕೆ ಹೋಗದಂತೆ ತಡೆಯುತ್ತಿದ್ದಾರೆ. ಅವಘಡದಲ್ಲಿ ಸುಮಾರು 50ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಕರಕಲಾಗಿವೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಕೆಲವು ಮನೆಗಳಿಗೂ ಹಾನಿ ಆಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಮಧ್ಯಪ್ರದೇಶ: ಗುಡಿಸಲಿಗೆ ಬೆಂಕಿ ತಗುಲಿ ಮೂವರು ಬಾಲಕರ ದುರ್ಮರಣ

ABOUT THE AUTHOR

...view details