ಕರ್ನಾಟಕ

karnataka

ಬೆಂಕಿ ಅವಘಡ

ETV Bharat / videos

ರಾಯಚೂರು ಲ್ಯಾಬೋರೇಟರಿ ಘಟಕದಲ್ಲಿ ಬೆಂಕಿ ಅವಘಡ; ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿ - ಮಿಕಲ್ ಕಂಪನಿಗೂ ಬೆಂಕಿ ಆವರಿಸುವ ಆತಂಕ

By

Published : Apr 22, 2023, 12:54 PM IST

ರಾಯಚೂರು: ಇಲ್ಲಿಯ ವಡ್ಲೂರು ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ರಾಯಚೂರು ಲ್ಯಾಬೋರೇಟರಿ ಪ್ರೈವೇಟ್​ ಲಿಮಿಟೆಡ್ ಕಂಪನಿಯ ಉಗ್ರಾಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಳಗ್ಗೆ ಉಗ್ರಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಕೆನ್ನಾಲಿಗೆ ಇಡಿ ಉಗ್ರಾಣ ಹೊತ್ತಿ ಉರಿದಿದೆ. ಕೆಮಿಕಲ್ ಫ್ಯಾಕ್ಟರಿಗೆ ಬೆಂಕಿ ಹೊತ್ತಿದ್ದರಿಂದ ಸುತ್ತಲೂ ದಟ್ಟವಾದ ಹೊಗೆ ಆವರಿಸಿದೆ. ಇತರ ‌ಕೆಮಿಕಲ್ ಕಂಪನಿಗೂ ಬೆಂಕಿ ಆವರಿಸುವ ಆತಂಕ ಎದುರಾಗಿತ್ತು. ಘಟನೆ ಕುರಿತು ಫ್ಯಾಕ್ಟರಿ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ 5 ಅಗ್ನಿಶಾಮಕ ವಾಹನಗಳು ದೌಡಾಯಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿವೆ. 

ಇನ್ನು ಬೆಂಕಿ ಅವಘಡದಲ್ಲಿ ಅಪಾರ ಪ್ರಮಾಣದ ವಸ್ತಗಳು ಬೆಂಕಿಗಾಹುತಿಯಾಗಿವೆ. ಘಟನೆಯ ವಿಡಿಯೋ ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದೆ. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್‌ ಠಾಣೆ ಅಧಿಕಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಘಟನೆಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ:Watch.. ಬಳ್ಳಾರಿಯಲ್ಲಿ ಕಟ್ಟಿಗೆ ಸ್ಟಾಕ್ ಯಾಡ್‌ರ್ಗೆ ಬೆಂಕಿ: 20 ಲಕ್ಷ ರೂ ನಷ್ಟ 

ABOUT THE AUTHOR

...view details