ದಿಲ್ಲಿಯ ಪ್ಲೈವುಡ್ ಅಂಗಡಿಯಲ್ಲಿ ಬೆಂಕಿ, 12 ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ: ವಿಡಿಯೋ - ಅಗ್ನಿಶಾಮಕ ದಳ ಸಿಬ್ಬಂದಿ
ನವದೆಹಲಿ:ದೆಹಲಿಯ ಗಾಂಧಿನಗರ ಮಾರುಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಪ್ಲೈಬೋರ್ಡ್ ಅಂಗಡಿಗೆ ನಸುಕಿನ ಜಾವ ಬೆಂಕಿ ಹೊತ್ತಿಕೊಂಡಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಸತತ ಪ್ರಯತ್ನ ನಡೆಸುತ್ತಿದೆ. ಆದರೆ, ಬೆಂಕಿ ಮೂರು ಅಂತಸ್ತುಗಳಿಗೆ ದಟ್ಟವಾಗಿ ವ್ಯಾಪಿಸಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಬೆಂಕಿಯ ಶಾಖಕ್ಕೆ ಅಂಗಡಿಯ ಒಳಗೆ ರಕ್ಷಣಾ ಸಿಬ್ಬಂದಿ ತೆರಳಲೂ ಸಾಧ್ಯವಾಗುತ್ತಿಲ್ಲವಾಗಿದೆ.
ಬೆಳಗಿನ ಜಾವ 4.10 ನಿಮಿಷದ ಸುಮಾರು ಅಂಗಡಿಗೆ ಬೆಂಕಿ ಹತ್ತಿದ ಬಗ್ಗೆ ಮಾಹಿತಿ ಬಂತು. ಬಳಿಕ ಫೈರಿಂಗ್ ಎಂಜಿನ್ಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಆದರೆ, ವ್ಯಾಪಕವಾಗಿ ಹಬ್ಬಿದ ಕಾರಣ ತಹಬದಿಗೆ ಬರುತ್ತಿಲ್ಲ. 4 ಗಂಟೆಯಿಂದಲೂ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಪ್ಲೈವುಡ್ಗಳಿದ್ದ ಅಂಗಡಿಗೆ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಸದ್ಯ 21 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದರು.
ಇದನ್ನೂ ಓದಿ:Video: ರಸ್ತೆಯ ಮೇಲೆ ಟ್ರಕ್ ಪಲ್ಟಿ: ದಂಪತಿ ಸಾವು - ಮೂರು ಕಾರು, ಒಂದು ಬೈಕ್ ಜಖಂ