ಕರ್ನಾಟಕ

karnataka

ETV Bharat / videos

ಅಥಣಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬಾರಿ ಅಗ್ನಿ ಅವಘಡ - ವಿದ್ಯುತ್ ವಿತರಣಾ ಕೇಂದ್ರ

By

Published : Jan 19, 2023, 7:17 PM IST

Updated : Feb 3, 2023, 8:39 PM IST

ಚಿಕ್ಕೋಡಿ: ಅಥಣಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬಾರಿ ಬೆಂಕಿ ಅವಘಡ ಸಂಭವಿಸಿದೆ. ವಿಜಯಪುರ ಅಥಣಿ ರಸ್ತೆಯ ತಹಶೀಲ್ದಾರ್ ಕಚೇರಿ ಹತ್ತಿರ ಇರುವ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಭಾರಿ ಶಬ್ದದೊಂದಿಗೆ ಬ್ಲಾಸ್ಟ್​ ಆಗಿ ಅಗ್ನಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

ಮುಂಜಾಗ್ರತಾ ಕ್ರಮವಾಗಿ ಎಂಟಕ್ಕೂ ಹೆಚ್ಚು ಸುತ್ತಮುತ್ತಲಿನ ತಾಲೂಕುಗಳ ಅಗ್ನಿಶಾಮಕ ದಳದ ಜಲ ವಾಹನಗಳನ್ನು ಸ್ಥಳಕ್ಕೆ ತರಲಾಗಿದೆ. ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿದ ಕಾರಣ ವಿಜಯಪುರ ಅಥಣಿ ಮಾರ್ಗವನ್ನು ಕೆಲವು ಗಂಟೆಗಳ ಕಾಲ ಸಂಚಾರಕ್ಕೆ ಬಂದ್​ ಮಾಡಲಾಗಿತ್ತು. ಈ ಅಗ್ನಿ ಅವಘಡದಿಂದ ಸುತ್ತಮುತ್ತಲಿನ ಹಳ್ಳಿಗಳಿಗೆ ವಿದ್ಯುತ್ ವ್ಯತ್ಯಯವಾಗುವುದರಿಂದ ಗ್ರಾಹಕರು ಸಹಕರಿಸಬೇಕೆಂದು ಅಥಣಿ ವಿದ್ಯುತ್ ವಿತರಣಾ ಕೇಂದ್ರದ ಅಧಿಕಾರಿ ಸಿಸಿ ಯಂಕಂಚಿ ಈಟಿವಿ ಭಾರತ ಮುಖಾಂತರ ಮನವಿ ಮಾಡಿದ್ದಾರೆ.

ಇದನ್ನೂ ನೋಡಿ:ರಸ್ತೆ ಪಕ್ಕದಲ್ಲಿರುವ ಹ್ಯಾಂಡ್ ​ಬೋರ್​ಗೆ ವಾಹನ ಡಿಕ್ಕಿ: ಚಾಲಕನ ಹೊಟ್ಟೆಗೆ ಚುಚ್ಚಿದ ಬೋರ್​ ಹಿಡಿಕೆ... ವಿಡಿಯೋ

Last Updated : Feb 3, 2023, 8:39 PM IST

ABOUT THE AUTHOR

...view details