ಕರ್ನಾಟಕ

karnataka

ಡಂಪಿಂಗ್ ಯಾರ್ಡ್​ನಲ್ಲಿ ಕಾಣಿಸಿಕೊಂಡ ಬೆಂಕಿ

ETV Bharat / videos

ಮಂಗಳೂರು: ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಮತ್ತೆ ಬೆಂಕಿ

By

Published : Mar 14, 2023, 8:27 AM IST

ಮಂಗಳೂರು (ದಕ್ಷಿಣ ಕನ್ನಡ):ನಗರದ ಪಚ್ಚನಾಡಿ ಡಂಪಿಂಗ್ ಯಾರ್ಡ್​ನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು ಇಡೀ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿತು. ಈ ಮೂಲಕ ಪ್ರಸಕ್ತ ವರ್ಷದಲ್ಲಿ ಐದು ಬಾರಿ ಬೆಂಕಿ ಬಿದ್ದಂತಾಗಿದೆ. ಸೋಮವಾರ ಮಧ್ಯಾಹ್ನದ ಸುಮಾರಿಗೆ ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಎಂಆರ್​ಪಿಎಲ್, ಎನ್ಎಂಪಿಎ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಸೇರಿದಂತೆ ಕದ್ರಿ ಅಗ್ನಿಶಾಮಕದಳ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಂದಿಸುವ ಕಾರ್ಯಾಚರಣೆ ನಡೆಸಿದರು. 

ಜೆಸಿಬಿ ಮೂಲಕವೂ ಕಾರ್ಯಾಚರಣೆ ನಡೆಸಿ ಮಣ್ಣು ಹಾಕಿ ಬೆಂಕಿ ನಂದಿಸುವ ಕಾರ್ಯ ನಡೆಯಿತು. ನೀರು ಹಾಯಿಸಿದಷ್ಟು ಕೆನ್ನಾಲಿಗೆ ಮತ್ತಷ್ಟು ಆವರಿಸಿ ಪರಿಸರದಲ್ಲಿ ದಟ್ಟ ಹೊಗೆ ಸೃಷ್ಟಿಸಿತು. ಮಂಗಳೂರು ನಗರ ಪಾಲಿಕೆ (ಮನಪಾ) ಆಯುಕ್ತ ಚೆನ್ನಬಸಪ್ಪ, ಮೇಯರ್ ಜಯಾನಂದ ಅಂಚನ್, ಆರೋಗ್ಯಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ‌. ಧಗೆಗೆ ಡಂಪಿಂಗ್ ಯಾರ್ಡ್‌ನಲ್ಲಿ ಮೀಥೇನ್ ಅನಿಲ ಉತ್ಪತ್ತಿಯಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚೆಗೆ ಕಾಣಿಸಿಕೊಂಡ ಬೆಂಕಿ ಹತ್ತು ದಿನಗಳಾದರೂ ತಹಬದಿಗೆ ಬಂದಿರಲಿಲ್ಲ. ವಿಷಕಾರಿ ದಟ್ಟ ಹೊಗೆ ಆವರಿಸಿ ಪರಿಸರದ ಜನರು ಕೆಮ್ಮು, ಉಸಿರಾಟದ ಸಮಸ್ಯೆಗಳಿಗೆ ಸಿಲುಕಿದ್ದರು.

ಇದನ್ನೂ ಓದಿ:ಕಡಬದಲ್ಲಿ ಕಾಡುತ್ತಿದೆ ಕಾಡ್ಗಿಚ್ಚು.. ವನ್ಯ ಪ್ರಾಣಿಗಳ ಪರದಾಟ

ABOUT THE AUTHOR

...view details