ಕರ್ನಾಟಕ

karnataka

ಹುಬ್ಬಳ್ಳಿ ವಿಮಾನ ನಿಲ್ದಾಣ ಆವರಣದಲ್ಲಿ ಆಕಸ್ಮಿಕ ಬೆಂಕಿ

ETV Bharat / videos

ಹುಬ್ಬಳ್ಳಿ ವಿಮಾನ ನಿಲ್ದಾಣ ಆವರಣದಲ್ಲಿ ಬೆಂಕಿ: ಮರಗಳು ಅಗ್ನಿಗಾಹುತಿ - ಬೆಂಕಿ ಅವಘಡ ಪ್ರಕರಣ

By

Published : Feb 27, 2023, 3:08 PM IST

ಹುಬ್ಬಳ್ಳಿ:ಇಲ್ಲಿನ ವಿಮಾನ ನಿಲ್ದಾಣದ ಆವರಣದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಸಾಕಷ್ಟು ಮರಗಳು ಸುಟ್ಟು ಹೋಗಿವೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು. ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕಿಡಿಗೇಡಿಗಳ ಕೃತ್ಯದ ಶಂಕೆ ವ್ಯಕ್ತವಾಗಿದೆ. ನಿಲ್ದಾಣದ ಗೇಟ್ ಪಕ್ಕದ ಕಾಂಪೌಂಡ್ ಬಳಿ ಬೆಂಕಿ ಆವರಿಸಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗೋಕುಲ ರೋಡ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

ಇದ್ನೂ ನೋಡಿ:ಪ್ರತ್ಯೇಕ ಘಟನೆ: ಗೋದಾಮಿಗೆ ಬೆಂಕಿ‌ ಬಿದ್ದು ಫರ್ನೀಚರ್​​ ಬೆಂಕಿಗಾಹುತಿ.. ವಾಹನಕ್ಕೆ ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿ

ABOUT THE AUTHOR

...view details