ಕರ್ನಾಟಕ

karnataka

ಬಂದರಿನಲ್ಲಿ ಬೆಂಕಿ ಅವಘಡ

ETV Bharat / videos

ಬಂದರಿನಲ್ಲಿ ಬೆಂಕಿ ಅವಘಡ; 40ಕ್ಕೂ ಹೆಚ್ಚು ದೋಣಿಗಳು ಬೆಂಕಿಗಾಹುತಿ, ಹಲವರು ಸಾವು ಶಂಕೆ - ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ

By ETV Bharat Karnataka Team

Published : Nov 20, 2023, 12:59 PM IST

Fire Accident in Visakhapatnam:ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೀನುಗಾರಿಕಾ ಬಂದರಿನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ದೋಣಿಯೊಂದರ ಬಳಿ ಉಂಟಾದ ಬೆಂಕಿ ಅಕ್ಕಪಕ್ಕದ ದೋಣಿಗಳಿಗೂ ವ್ಯಾಪಿಸಿದೆ. ಈ ಘಟನೆಯಲ್ಲಿ 40ಕ್ಕೂ ಹೆಚ್ಚು ದೋಣಿಗಳು ಸುಟ್ಟು ಕರಕಲಾಗಿವೆ. 

ಈಗಾಗಲೇ 40ಕ್ಕೂ ಹೆಚ್ಚು ದೋಣಿಗಳು ಸುಟ್ಟು ಕರಕಲಾಗಿವೆ ಎನ್ನುತ್ತಾರೆ ಸ್ಥಳೀಯರು. ಮಾಹಿತಿ ಪಡೆದ ಬಂದರು ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಬೆಂಕಿಯನ್ನು ನಂದಿಸಲು ಅಧಿಕಾರಿಗಳು ವಿಶಾಖಪಟ್ಟಣಂ ಅಂಚೆ ಪ್ರಾಧಿಕಾರದಿಂದ ವಿಶೇಷ ಅಗ್ನಿಶಾಮಕ ದೋಣಿಯನ್ನು ತಂದರು. ಅವಘಡದ ವೇಳೆ ಬೋಟ್​ಗಳಲ್ಲಿ ಮಲಗಿದ್ದವರು ಬೆಂಕಿಗೆ ಆಹುತಿಯಾಗಿರಬಹುದು ಎಂದು ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ದೋಣಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಈ ಘಟನೆಯಿಂದ ಕೋಟಿಗಟ್ಟಲೆ ಆಸ್ತಿ ನಷ್ಟವಾಗಿದೆ ಎಂದು ಬೋಟ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಸುಮಾರು 25 ರಿಂದ 30 ಕೋಟಿ ಮೌಲ್ಯದ ಬೋಟ್​ಗಳು ಬೆಂಕಗಾಹುತಿಯಾಗಿವೆ. ಅವಘಡದ ವೇಳೆ ಕೆಲವು ಬೋಟ್​ಗಳು ಮೀನು ಬೇಟೆ ಮುಗಿಸಿ ಬಂದರಿಗೆ ಬಂದಿದ್ದವು. ಕೆಲವು ಬೋಟ್​ಗಳು ಇಂಧನ ತುಂಬಿಸಿಕೊಂಡು ಮೀನುಗಾರಿಕೆಗೆ ತೆರಳಲು ಸಿದ್ಧತೆ ನಡೆಸಿದ್ದವು. ಈ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಇದರಿಂದ ಮಾರಾಟಕ್ಕೆ ಸಿದ್ಧವಾಗಿದ್ದ ಮತ್ಸ್ಯ ಸಂಪತ್ತೆಲ್ಲ ಬೂದಿಯಾಗಿ ಮಾರ್ಪಟ್ಟಿದ್ದು, ಬೋಟ್ ಮಾಲೀಕರು, ಮೀನುಗಾರರು ಅಳಲು ತೋಡಿಕೊಂಡಿದ್ದಾರೆ. ಮತ್ತೊಂದೆಡೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಹತೋಟಿಗೆ ತರಲು ಹರಸಾಹಸ ಪಟ್ಟರು.

ಓದಿ:ಉತ್ತರಕಾಶಿ: ಸುರಂಗದೊಳಗೆ 9 ದಿನಗಳಿಂದ 41 ಕಾರ್ಮಿಕರ ಜೀವನ್ಮರಣದ ಹೋರಾಟ; ಭರದಿಂದ ಸಾಗಿದ ಪರ್ಯಾಯ ರಕ್ಷಣಾ ಕಾರ್ಯ

ABOUT THE AUTHOR

...view details