ಕರ್ನಾಟಕ

karnataka

ಎನ್‌ಡಬ್ಲ್ಯೂಕೆಆರ್‌ಟಿಸಿ ಕಾರ್ಯಾಗಾರದಲ್ಲಿ ಅಗ್ನಿ ಅವಘಡ

ETV Bharat / videos

ಎನ್‌ಡಬ್ಲ್ಯೂಕೆಆರ್‌ಟಿಸಿ ಕಾರ್ಯಾಗಾರದಲ್ಲಿ ಅಗ್ನಿ ಅವಘಡ: ತನಿಖೆಗೆ ಆದೇಶಿಸಿದ ಎಂಡಿ - ಎನ್‌ಡಬ್ಲ್ಯೂಕೆಆರ್‌ಟಿಸಿ ಕಾರ್ಯಾಗಾರ

By

Published : Feb 27, 2023, 8:56 AM IST

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ಕಾರ್ಯಗಾರ(ಎನ್‌ಡಬ್ಲ್ಯೂಕೆಆರ್‌ಟಿಸಿ)ದಲ್ಲಿ ಭಾನುವಾರ ಸಂಜೆ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದೆ. ಪ್ರಾದೇಶಿಕ ಕಾರ್ಯಾಗಾರದ ಆವರಣದಲ್ಲಿರುವ ಸ್ಕ್ರಾಪ್ ಯಾರ್ಡ್​ನಲ್ಲಿ ಇರುವ ವಿದ್ಯುತ್ ಸಂಪರ್ಕದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮಾಹಿತಿ ತಿಳಿದು ಕೂಡಲೇ ಆಗಮಿಸಿದ ಸಂಸ್ಥೆಯ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಅಗ್ನಿ ಅವಘಡದಲ್ಲಿ ಬಸ್​​ ಪ್ರಯಾಣಿಕರ ಸೀಟುಗಳ ಹಳೆಯ ಕವರ್ ರಿಗ್ಜಿನ್, ಒಣಗಿದ ಹುಲ್ಲು ಹಾಗೂ ಮತ್ತಿತರ ಕಸದ ರಾಶಿಗೆ ಬೆಂಕಿ  ಹೊತ್ತಿಕೊಂಡಿದೆ. ಘಟನೆಯಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಸುಟ್ಟಿರುವುದಿಲ್ಲ. ಆರ್ಥಿಕ ನಷ್ಟವಾಗಿರುವುದಿಲ್ಲ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ಹೆಚ್. ರಾಮನಗೌಡ ಮಾಹಿತಿ ನೀಡಿದ್ದಾರೆ. ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಅವರು ಘಟನೆಯ ಬಗ್ಗೆ ಅಧಿಕಾರಿ  ತನಿಖೆಗೆ ಆದೇಶಿಸಿರುತ್ತಾರೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ  ಮಾಹಿತಿ ನೀಡಿದ್ದಾರೆ.‌ 

ಇದನ್ನೂ ಓದಿ:ವಿಜಯಪುರದಲ್ಲಿ ಗುಡಿಸಲಿಗೆ ಆಕಸ್ಮಿಕ ಬೆಂಕಿ: ದಂಪತಿ ಸಜೀವ ದಹನ

ABOUT THE AUTHOR

...view details