ಕರ್ನಾಟಕ

karnataka

ಬಸ್ ಟಿಕೆಟ್​ಗಾಗಿ ಜಗಳ : ಪೊಲೀಸ್ ಠಾಣೆಗೆ ಬಸ್ ತಗೆದುಕೊಂಡು ಹೋದ ಚಾಲಕ

ETV Bharat / videos

ಹುಬ್ಬಳ್ಳಿಯಲ್ಲಿ ಬಸ್ ಟಿಕೆಟ್​ಗಾಗಿ ಜಗಳ.. ಪೊಲೀಸ್ ಠಾಣೆಗೆ ಬಸ್ ತೆಗೆದುಕೊಂಡು ಹೋದ ಚಾಲಕ

By ETV Bharat Karnataka Team

Published : Sep 7, 2023, 1:39 PM IST

ಹುಬ್ಬಳ್ಳಿ :ನಿನ್ನೆ ರಾತ್ರಿ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದ ಬಳಿ ಬಸ್​ ನಿರ್ವಾಹಕರು ಹಾಗೂ ಪ್ರಯಾಣಿಕರ ನಡುವೆ ಜಗಳವಾಗಿ, ಈ ಸಮಸ್ಯೆ ಪರಿಹರಿಸಲು ಕೊನೆಗೆ ಚಾಲಕ ಬಸ್ಸನ್ನೇ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದ ಘಟನೆ ನಡೆದಿದೆ.

ಟಿಕೆಟ್ ವಿಚಾರವಾಗಿ ಮಹಿಳಾ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಇದನ್ನು ನೋಡಿದ ಬಸ್ ಚಾಲಕ ಬಗೆಹರಿಯದಿದ್ದಾಗ ಬಸ್ಸನ್ನೇ ಗೋಕುಲ್ ರೋಡ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸರು ಪ್ರಯಾಣಿಕರು ಹಾಗೂ ಕಂಡಕ್ಟರ್ ಅವರ ಸಮಸ್ಯೆಯನ್ನು ಆಲಿಸಿ ಇಬ್ಬರನ್ನೂ ಸಮಾಧಾನಪಡಿಸಿ ಕಳುಹಿಸಿದ್ದಾರೆ‌‌. ಇದರಿಂದ ಬಸ್​ನಲ್ಲಿದ್ದ ಸಹ ಪ್ರಯಾಣಿಕರಿಗೆ ಕೆಲ ಕಾಲ ಸಮಸ್ಯೆಯಾಗಿತ್ತು. ಆದರೆ ಬಸ್ ಚಾಲಕ ಹಾಗೂ ಪೊಲೀಸರ ಕಾರ್ಯವೈಖರಿಗೆ ಬಸ್​ನಲ್ಲಿದ್ದ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರಾಗಿದ್ದ ಮಹಿಳೆ ಬಳಿ ಸರಿಯಾದ ಆಧಾರ್​ ಕಾರ್ಡ್ ಪ್ರೂಫ್​ ಇರಲಿಲ್ಲ. ಸರಿಯಾದ ಆಧಾರ್​ ಕಾರ್ಡ್​ ತೋರಿಸಿ ಅಂದಿದ್ದಕ್ಕೆ ಕಂಡಕ್ಟರ್​ ಹಾಗೂ ಮಹಿಳೆ ಮಧ್ಯೆ ಜಗಳವಾಗಿದೆ. ಮಧ್ಯ ಪ್ರವೇಶಿಸಿದ ಪೊಲೀಸರು ಸಮಾಧಾನ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಸದ್ಯಕ್ಕೆ ಟಿಕೆಟ್ ಕೊಟ್ಟು, ಮತ್ತೊಮ್ಮೆ ಎಲ್ಲಿಯಾದರೂ ಹೋಗುವಾಗ ಆಧಾರ್​ ಕಾರ್ಡ್ ತೆಗೆದುಕೊಂಡು ಹೋಗುವಂತೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಅದರಂತೆ ಕಂಡಕ್ಟರ್​ಗೂ, ಮಹಿಳೆಯರ ಜೊತೆ ಚೆನ್ನಾಗಿ ಸಹಕರಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ನೋಡಿ :ಸೀಟಿಗಾಗಿ ಮಹಿಳೆಯರ ಕಿತ್ತಾಟ; ಜಗಳ ಬಿಡಿಸಲಾಗದೇ ಪೊಲೀಸ್‌ ಠಾಣೆಗೆ ಬಸ್ ಚಲಾಯಿಸಿದ ಚಾಲಕ- ವಿಡಿಯೋ

ABOUT THE AUTHOR

...view details