ಕರ್ನಾಟಕ

karnataka

ನಾಗರ ಹಾವು ಮತ್ತು ಹುಚ್ಚು ನಾಯಿ ಮಧ್ಯೆ ಭೀಕರ

ETV Bharat / videos

ಧಾರವಾಡದಲ್ಲಿ ನಾಗರಹಾವು-ಶ್ವಾನದ ನಡುವೆ ಭೀಕರ ಕಾಳಗ: ವಿಡಿಯೋ ನೋಡಿ - dog snake fight

By

Published : Jul 4, 2023, 10:56 AM IST

Updated : Jul 4, 2023, 11:32 AM IST

ಧಾರವಾಡ:ನಾಗರ ಹಾವು ಮತ್ತು ಹುಚ್ಚು ನಾಯಿಯ ಮಧ್ಯೆ ಭಯಾನಕ ಕಾಳಗ ನಡೆದ ಘಟನೆ ಧಾರವಾಡ ಜಿಲ್ಲೆಯ ಹೊರವಲಯದಲ್ಲಿ ನಡೆದಿದೆ. ತೀವ್ರವಾಗಿ ಸೆಣಸಾಡಿ ಕೊನೆಗೆ ಎರಡೂ ಪ್ರಾಣಬಿಟ್ಟಿವೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಉಮೇಶ್ ಹಿರೇಮಠ ಎಂಬವರ ಜಮೀನಿನಲ್ಲಿ ನಾಯಿ ಮತ್ತು ನಾಗರ ಹಾವಿನ ಮಧ್ಯೆ ಸಂಘರ್ಷ​ ಶುರುವಾಗಿ ಸಾವಿನಲ್ಲಿ ಮುಕ್ತಾಯಗೊಂಡಿದೆ. ಈ ದೃಶ್ಯವನ್ನು ಉಮೇಶ್ ಅವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಸುಮಾರು 15 ನಿಮಿಷಗಳ ಕಾಲ ಪೈಪೋಟಿ ನಡೆದಿದೆ. ಹಾವು ತನ್ನನ್ನು ರಕ್ಷಿಸಿಕೊಳ್ಳಲು ನಾಯಿಗೆ ಕಚ್ಚಿದೆ. ಕೋಪಗೊಂಡ ನಾಯಿಯೂ ಹಾವನ್ನು ಕಚ್ಚಿ, ಎಳೆದಾಡಿ ಗಾಯಗೊಳಿಸಿದೆ. ಹೀಗಾಗಿ ಹಾವು ಮತ್ತು ನಾಯಿ ಎರಡೂ ಸ್ವಲ್ಪ ಹೊತ್ತಿನಲ್ಲೇ ಅಸುನೀಗಿವೆ.

ಹಾವಿನ ವಿಷದಿಂದ ಬಳಲಿ ಅಸ್ವಸ್ಥಗೊಂಡ ನಾಯಿ ಹಾವನ್ನು ಬಿಟ್ಟು ಸ್ವಲ್ಪ ಮುಂದೆ ಹೋಗಿ ಅಸುನೀಗಿದರೆ, ಹಾವು ನೋವು ತಾಳಲಾರದೆ ಉಮೇಶ ಅವರಿದ್ದ ಮನೆಯ ಬಳಿ ಬರಲು ಪ್ರಯತ್ನಿಸಿ ಕೊನೆಗೆ ಪ್ರಾಣ ಬಿಟ್ಟಿತು. ವಿಡಿಯೋ ಹುಬ್ಬೇರಿಸುವಂತಿದೆ. 

ಇದನ್ನೂ ಓದಿ:ಪಿಲಿಕುಳದಲ್ಲಿ ಹುಲಿಗಳ ಕಾಳಗ: 15 ವರ್ಷದ ಹೆಣ್ಣು ಹುಲಿ ಸಾವು

Last Updated : Jul 4, 2023, 11:32 AM IST

ABOUT THE AUTHOR

...view details