ಕರ್ನಾಟಕ

karnataka

ಅಯೋಧ್ಯೆದಲ್ಲಿ ಮಾ. 22ರಿಂದ ರಾಮಜನ್ಮೋತ್ಸವ: ಈ ಬಾರಿ ಐತಿಹಾಸಿಕವಾಗಿಸಲು ನಿರ್ಧಾರ

ETV Bharat / videos

ಅಯೋಧ್ಯಾದಲ್ಲಿ ಮಾ. 22ರಿಂದ ರಾಮಜನ್ಮೋತ್ಸವ: ಈ ಬಾರಿ ಐತಿಹಾಸಿಕವಾಗಿಸಲು ನಿರ್ಧಾರ - ರಾಮಮಂದಿರ ಟ್ರಸ್ಟ್

By

Published : Mar 11, 2023, 7:47 PM IST

ಅಯೋಧ್ಯಾ(ಉತ್ತರ ಪ್ರದೇಶ): ರಾಮನ ನಗರಿ ಅಯೋಧ್ಯೆಯಲ್ಲಿ ಈ ಬಾರಿ ರಾಮಲಾಲಾ ಜನ್ಮೋತ್ಸವ ಐತಿಹಾಸಿಕವಾಗಿಸಲು ರಾಮಮಂದಿರ ಟ್ರಸ್ಟ್ ಸಜ್ಜಾಗಿದೆ. ಮಾರ್ಚ್ 22ರಿಂದ ಮಾರ್ಚ್ 31ರವರೆಗೆ 9 ದಿನಗಳ ಕಾಲ ಅದ್ಧೂರಿಯಾಗಿ ರಾಮ ನವಮಿ ಆಚರಿಸಲು ಸಿದ್ಧತೆಗಳು ಆರಂಭವಾಗಿವೆ. ರಾಮಜನ್ಮೋತ್ಸವ ಸಮಿತಿಯನ್ನು ರಚಿಸುವ ಮೂಲಕ  ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುವ ಜವಾಬ್ದಾರಿಯನ್ನು ಗಣ್ಯರಿಗೆ ವಹಿಸಲಾಗಿದೆ. 

ರಾಮಜನ್ಮೋತ್ಸವದೊಂದಿಗೆ ಯುವಕರನ್ನು ಸಂಪರ್ಕಿಸಲು ರಾಮಮಂದಿರ ಟ್ರಸ್ಟ್ ವಿವಿಧ ಕ್ರೀಡೆಗಳನ್ನು ಆಯೋಜಿಸಲು ಮುಂದಾಗಿದೆ. ಒಲಿಂಪಿಕ್ಸ್‌ನಲ್ಲಿ ಮಾನ್ಯತೆ ಪಡೆದ ಕ್ರೀಡಾಕೂಟಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ನಡೆಯಲಿದೆ. ಒಲಿಂಪಿಕ್ಸ್‌ ಅಸೋಸಿಯೇಷನ್‌ನ ಅಧಿಕಾರಿಗಳನ್ನು ಸಂಪರ್ಕಿಸಿ ಸಹಕಾರ ಕೋರಲಾಗಿದೆ. ಈ ಮೂಲಕ ಪ್ರಮುಖ ಆಟಗಾರರನ್ನು ರಾಮಜನ್ಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಯೋಧ್ಯೆಗೆ ಕಳುಹಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಕ್ರೀಡೆಗಳೊಂದಿಗೆ ರಾಮನಗರಿ ಅಯೋಧ್ಯೆ ಹಾಡು, ಸಂಗೀತ, ಕಥಾ ಪ್ರವಚನದಿಂದಲೂ ಗಿಜಿಗುಡಲಿದೆ. ಅನೇಕ ಸಾಂಪ್ರದಾಯಿಕ ಕ್ರೀಡೆಗಳು ಮತ್ತು ಸಂಗೀತ ಕಾರ್ಯಕ್ರಮಗಳು, ಪ್ರತಿ ದಿನ ವಿವಿಧ ವಿಷಯಗಳ ಕುರಿತು ಕಥೆಗಾರರಿಂದ ಉಪನ್ಯಾಸ ಆಯೋಜಿಸಲಾಗುತ್ತದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ತಿಳಿಸಿದ್ದಾರೆ.

ಜೊತೆಗೆ ರಾಮನ ನಗರಿಯ ವಿವಿಧ ಸಾರ್ವಜನಿಕ ಸ್ಥಳಗಳಾದ ರಾಮ್ ಕಥಾ ಪಾರ್ಕ್ ಮತ್ತು ಭಜನ್ ಸಂಧ್ಯಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನೂತನ ರಾಮ ಮಂದಿರ ನಿರ್ಮಾಣವಾಗುತ್ತಿರುವುದರಿಂದ ಇದು ರಾಮನ ತಾತ್ಕಾಲಿಕ ಮಂದಿರದಲ್ಲಿ ಕೊನೆಯ ರಾಮಜನ್ಮೋತ್ಸವವಾಗಿರುವುದರಿಂದ ಐತಿಹಾಸಿಕವಾಗಿಸಲು ಸಕಲ ಸಿದ್ಧತೆಗಳನ್ನು ಆರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಋರಿಷಿಕೇಶ​ದಲ್ಲಿ ಅದ್ಧೂರಿ ಅಂತಾರಾಷ್ಟ್ರೀಯ ಯೋಗ ಉತ್ಸವ..

ABOUT THE AUTHOR

...view details