ಕರ್ನಾಟಕ

karnataka

ETV Bharat / videos

ಸಿನಿಮೀಯ ರೀತಿಯಲ್ಲಿ ಮಾದಕವಸ್ತು ಸಾಗಣೆದಾರರ ಸೆರೆ ಹಿಡಿದ ಪೊಲೀಸರು - ವಿಡಿಯೋ - ಸಿನಿಮೀಯ ರೀತಿಯಲ್ಲಿ ಮಾದಕವಸ್ತು ಸಾಗಾಟದಾರರನ್ನು ಸೆರೆ ಹಿಡಿದ ಪೊಲೀಸರು

By

Published : Aug 9, 2022, 10:12 AM IST

Updated : Feb 3, 2023, 8:26 PM IST

ಫಿರೋಜ್‌ಪುರ (ಪಂಜಾಬ್) : ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಫಿರೋಜ್‌ಪುರ ಠಾಣೆಯ ಪೊಲೀಸರು ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದಿದ್ದಾರೆ. ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಅನುಮಾನದಿಂದ ಒಂದು ಕಾರು ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ, ಕಾರು ಚಾಲಕ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಕಾರನ್ನು ಬೆನ್ನಟ್ಟಿದ್ದು, ಪೊಲೀಸ್ ಅಧಿಕಾರಿ ಆರೋಪಿಗಳ ವಾಹನದ ಚಕ್ರಕ್ಕೆ ಗುಂಡು ಹಾರಿಸಿದ್ದು, ವಾಹನ ಪಂಕ್ಚರ್ ಆಗಿದೆ. ಬಳಿಕ ಸುಮಾರು 10 ಕಿ.ಮೀ.ವರೆಗೆ ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಸೆರೆಹಿಡಿದಿದ್ದಾರೆ. ಬಂಧಿತ ಆರೋಪಿಗಳಿಂದ 10 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಕಾರ್ಯಾಚರಣೆ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Last Updated : Feb 3, 2023, 8:26 PM IST

ABOUT THE AUTHOR

...view details