ಆಂಜನೇಯ ಮೂರ್ತಿ ಎದುರು ದೇಹದಾರ್ಢ್ಯ ಪ್ರದರ್ಶನಕ್ಕೆ ಕಾಂಗ್ರೆಸ್ ಆಕ್ಷೇಪ - ETV Bharath Karnataka
ರತ್ಲಾಮ್ (ಮಧ್ಯ ಪ್ರದೇಶ):ಪ್ರಹ್ಲಾದ್ ಪಟೇಲ್ ಸಂಘಟನಾ ಸಮಿತಿ ಮತ್ತು ರತ್ಲಾಮ್ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಆಯೋಜಿಸಿದ್ದ 13ನೇ ಜೂನಿಯರ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳಾ ಸ್ಪರ್ಧಿಗಳ ಅಶ್ಲೀಲ ಪ್ರದರ್ಶನದ ಬಗ್ಗೆ ಕಾಂಗ್ರೆಸ್ ಮುಖಂಡರು, ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ ಕೋಲಾಹಲ ಸೃಷ್ಟಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಬಿಜೆಪಿ ಮತ್ತು ಬಿಜೆಪಿ ನಾಯಕ ಪ್ರಹ್ಲಾದ್ ಪಟೇಲ್ ವಿರುದ್ಧ ಕಾಂಗ್ರೆಸ್ ನಾಯಕ ಪರಸ್ ಸಕ್ಲೇಚಾ ವಾಗ್ದಾಳಿ ನಡೆಸಿದರು.
ಆಂಜನೇಯ ಮೂರ್ತಿಯ ಮುಂದೆ ಅಶ್ಲೀಲ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಮತ್ತು ಈ ಕ್ರಮವು ಮಹಿಳೆಯರು ಮತ್ತು ಹಿಂದೂ ದೇವತೆಗಳ ಬಗ್ಗೆ ಬಿಜೆಪಿಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಸಕ್ಲೇಚಾ ಟ್ವೀಟ್ ಮಾಡಿದ್ದಾರೆ. ಭಾಗವಹಿಸುವವರು ಆಕ್ಷೇಪಾರ್ಹ ವೇಷಭೂಷಣಗಳನ್ನು ಧರಿಸಿ ಕ್ಯಾಂಪ್ ವಾಕ್ ಮಾಡಿರುವ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಬಿಜೆಪಿ ಮುಖಂಡ ಆಯೋಜಿಸಿದ್ದ ಕಾರ್ಯಕ್ರಮವನ್ನು ಹಿಂದೂ ಸಂಘಟನೆಗಳು ಮತ್ತು ಕಾಂಗ್ರೆಸ್ ಖಂಡಿಸಿವೆ. ಬಿಜೆಪಿಯಿಂದ ಭಾರತೀಯ ಸಂಸ್ಕೃತಿ ಮತ್ತು ಮಹಿಳೆಯರನ್ನು ಅವಮಾನಿಸಲಾಗುತ್ತಿದೆ ಎಂದು ಸಕ್ಲೇಚಾ ಹೇಳಿದ್ದಾರೆ.
ಇದನ್ನೂ ಓದಿ:ಬ್ಯಾಟ್‌ನಲ್ಲಿ ಧೋನಿ ಹೆಸರು ಬರೆದು ಅರ್ಧಶತಕ ಸಿಡಿಸಿ ಯುಪಿ ಗೆಲುವಿಗೆ ಕಾಣಿಕೆ ನೀಡಿದ ಕಿರಣ್!