ಕುರಿ ಮೇಯಿಸಲು ಹೋಗಿ ಪ್ರವಾಹದಲ್ಲಿ ಸಿಲುಕಿದ ತಂದೆ ಮಗನ ರಕ್ಷಣೆ - ತಂದೆ ಮಗನ ರಕ್ಷಣೆ ವಿಡಿಯೋ
ಐದು ದಿನಗಳ ಹಿಂದೆ ಒಡಿಶಾದ ಅಮಂಗೇಕುಡ್ಗೆ ಮೇಕೆ ಮೇಯಿಸಲು ಹೋಗಿ ಅಲ್ಲೇ ಪ್ರವಾಹದಲ್ಲಿ ಸಿಲುಕಿದ್ದ ಕಂದರಪುರ ಗ್ರಾಮದ ತಂದೆ ಮಗನನ್ನು ಓಡಿಆರ್ಎಎಫ್ ತಂಡದಿಂದ ರಕ್ಷಣೆ ಮಾಡಲಾಗಿದೆ. ಧೈರಾಧರ್ ದೇಯಿ (ತಂದೆ) ಮತ್ತು ಅರ್ಜುನ್ ದಲೇಯಿ (ಮಗ) ಪ್ರವಾಹದಲ್ಲಿ ಸಿಲುಕಿರುವ ಮಾಹಿತಿ ದೊರೆತ ಕೂಡಲೇ ODRAF ತಂಡ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ. ತಂದೆ ಮಗ ಇಬ್ಬರೂ ನಾಲ್ಕು ದಿನ ತಾವು ಕೊಂಡುಹೋಗಿದ್ದ ಆಹಾರ ಸೇವಿಸಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಕೊನೆಯ ದಿನ ಇಬ್ಬರೂ ಉಪವಾಸ ಇದ್ದರು. ಸ್ಥಳಕ್ಕೆ ಸಚಿವ ರಣೇಂದ್ರ ಪ್ರತಾಪ್ ಭೇಟಿ ನೀಡಿ, ಕಾರ್ಯಾಚರಣೆ ಪರಿಶೀಲಿದ್ದರು. ಕಟಕ್ ಜಿಲ್ಲಾಧಿಕಾರಿ ರಕ್ಷಣಾ ತಂಡಕ್ಕೆ ಕೃತಜ್ಞತೆ ತಿಳಿಸಿದ್ದಾರೆ.
Last Updated : Feb 3, 2023, 8:26 PM IST